ಸೈಕಲ್ ಪಂಚರ್ ಪುರಾಣ

ಆ ಮಾತನ್ನು ಇನ್ನೂ ಮರೆತಿಲ್ಲ. “ನಿನಗೆ ಅಕ್ಕ ತಂಗೀರು ಯಾರಾದ್ರು ಇದ್ದಾರಾ ?” —

“ಇಲ್ಲ, ಯಾಕೆ ?”

“ಮತ್ತೆ, ಹುಡುಗೀರ್ ಸೈಕಲ್ ತಂದ್ಬಿಟ್ಟಿದ್ದೀಯಾ”…

ಸೈಕಲಿನಲ್ಲೂ ಹುಡುಗರ ಸೈಕಲ್, ಹುಡುಗೀರ ಸೈಕಲ್ ಅಂತ ಇರತ್ತೆ ಅಂತ ಗೊತ್ತಾಗಿದ್ದೇ, ಮೊಟ್ಟಮೊದನೆಯ ಬಾರಿಗೆ ನಾನು ಸೈಕಲಿನಲ್ಲಿ ಸ್ಕೂಲಿಗೆ ಹೋದಾಗ. ಉಫ್!!! ತೊಗೊಂಡಿದ್ದೇ, ಸೆಕೆಂಡೋ ಥರ್ಡೋ ಹ್ಯಾಂಡ್ ಸೈಕಲ್ಲು…ಏನೂ ಮಾಡುವ ಹಾಗಿರಲಿಲ್ಲ…ಛೆ…ಒಂಥರಾ ವೇಸ್ಟ್ ಫೆಲೋ ನಾನು.

ಸೈಕಲ್ ವಿಚಾರವಾಗಿ ನನಗೆ ತಿಳಿದ ಮೊದಲನೆಯ ಪಾಠವೆಂದರೆ, “ನಿಧಾನವಾಗಿ ಹೋಗುವುದಕ್ಕಿಂತ ಫಾಸ್ಟಾಗಿ ಹೋಗೋದು ಈಸಿ”…ಆಮೇಲಾಮೇಲೆ ಇನ್ನೂ ಏನೇನೋ ಗೊತ್ತಾಗೋಕ್ಕೆ ಶುರುವಾಯ್ತು. ಸೈಕಲ್ಗೆ ಅವಾಗವಾಗ ‘ಬ್ಲೋ’ ಹೊಡಿಸಬೇಕು. ಬ್ಲೋ ಹೊಡಿಸೋಕ್ಕೆ 25 ಪೈ ಪಡೆಯುವ ಒಬ್ಬನ ಅಂಗಡಿ ಇತ್ತು. ನಮ್ಮ ಫ್ರೆಂಡ್ಸ್ ಎಲ್ಲ ಅಲ್ಲೇ ಹೊಡಿಸ್ತಾ ಇದ್ದದ್ದು. ನಾನೂ ಗುರುತಿಟ್ಕೊಂಡಿದ್ದೆ. ನಾನು ದೊಡ್ಡೋನಾಗಿ ಕೆಲ್ಸಕ್ಕೆ ಸೇರ್ದಾಗ, ಮನೇಲೆ ಬ್ಲೋ ಹೊಡಿಯೋ ಪಂಪ್ ತಂದಿಟ್ಕೋಬೇಕು ಅಂತ ಮಾಡಿದ್ದೆ. ಸೈಕಲ್ ಬಗ್ಗೆ ಆಮೇಲಾಮೇಲೆ ಇನ್ನೂ ಏನೇನೋ ಗೊತ್ತಾಗೋಕ್ಕೆ ಶುರುವಾಯ್ತು.

೧. ಸೈಕಲ್ಲಿಗೆ ಚೈನ್ ಅಂತ ಇರತ್ತೆ. ಇದು ಅವಾಗವಾಗ ಲೂಸ್ ಆಗ್ತಾ ಇರತ್ತೆ. ಅದನ್ನು ಟೈಟ್ ಮಾಡಿಸಬೇಕು. ಇದಕ್ಕೆ ೧ ರೂಪಾಯಿ.

೨. ವಾಲ್-ಟ್ಯೂಬ್ ಅನ್ನೋ ಒಂದು ಸೂಕ್ಷ್ಮ ಜಾಗ ಇರತ್ತೆ. ಅದಕ್ಕೇನಾದ್ರು ಏಟಾದ್ರೆ ಇಡೀ ಟ್ಯೂಬ್ ಹೋದಂತೆ ಅಂತ…..

೩. ಸೈಕಲ್ ಮಡ್ಗಾರ್ಡ್ ತುಂಬಾ ಶಬ್ದ ಮಾಡ್ತಾ ಇದ್ರೆ, ಅದಕ್ಕೆ ಕ್ಲಾಂಪ್ ಹಾಕಿಸಬೇಕು, ಇದು ತುಂಬಾ ಕಾಸ್ಟಲಿ. ಎಷ್ಟು ಅಂತ ಗೊತ್ತಿರಲಿಲ್ಲ.

ಅಗಾಗ ನನ್ನ ಫ್ರೆಂಡ್ಸು ಸೈಕಲ್ ಪಂಚರ್ ಆಗಿದೆ ಅಂತ ಹೇಳೋರು..ನನಗೆ ಗೊತ್ತಾದ ವಿಷಯವೆಂದರೆ. ‘ಪಂಚರ್’ ಅನ್ನೋದು ಬ್ಲೋ ಹೊಡಿಸುವುದಕ್ಕಿಂತ ಬೇರೆಯದು. ಟ್ಯೂಬಿನಲ್ಲಿ ಒಂದು ಸಣ್ಣ ತೂತಾಗಿಬಿಟ್ಟರೆ, ಗಾಳಿ ಎಲ್ಲ ತುಂಬಾ ಬೇಗ ಹೊರಟುಹೋಗತ್ತೆ. ಅದನ್ನು ಸರಿಪಡಿಸಬೇಕೆಂದರೆ ತುಂಬಾ ದುಬಾರಿ, 2 ರೂಪಾಯಿ 50 ಪೈಸೆ. ಹಾಗಾಗಿ ಸೈಕಲ್ ಓಡಿಸುವಾಗ ಹುಶಾರಾಗಿ ಓಡಿಸಬೇಕು. ಕಲ್ಲು ಮುಳ್ಳು ಇವುಗಳ ಮೇಲೆ ಹೋಗಬಾರದು ಅನ್ನೋ ತಿಳಿವಳಿಕೆ ಬಂದಿತ್ತು.

ಹೀಗಿರುವಾಗ….ಒಂದಿನ ಸಂಜೆ ಸ್ಕೂಲ್ ಬಿಟ್ಮೇಲೆ….

ಸೈಕಲ್ ಸ್ಟಾಂಡಿಗೆ ಹೋಗಿ, ಸೈಕಲ್ ತಳ್ಳಿಕೊಳ್ಳುತ್ತಾ, ಸ್ಕೂಲ್ ಆಚೆಗೆ ಬಂದಾಗ ಗೊತ್ತಾಗಿದ್ದೇನಪ್ಪಾ ಅಂದ್ರೆ, ನನ್ನ ಸೈಕಲ್ ಕೂಡ ಪಂಚರ್ ಆಗಿದೆ ಅಂತ. ಬೆಳಗ್ಗೆ ಬರುವಾಗ ಚೆನ್ನಾಗಿಯೇ ಇದ್ದ ಟ್ಯೂಬಿಗೆ ಯಾರೋ ಬೇಕಂತಲೇ ಮಾಡಿದ್ದಾರೆ ಅಂತ ಅನ್ನಿಸ್ತು. ಈ ಅನುಮಾನಕ್ಕೆ ಇನ್ನೂ ಒಂದು ಕಾರಣ ಇತ್ತು. ಇತ್ತೀಚೆಗೆ, ನನ್ನ ಫ್ರೆಂಡ್ಸುಗಳ ಸೈಕಲ್ಲುಗಳಿಗೂ ಹೀಗೆ ಆಗ್ತಾ ಇತ್ತು. ಸರಿ, ಸ್ಕೂಲಿನಿಂದ ಮನೆಗೆ ಹೋಗುವ ದಾರಿಯಲ್ಲಿ ಇದ್ದ ಒಂದು ಸೈಕಲ್ ಶಾಪಿನಲ್ಲಿ ರಿಪೇರಿ ಮಾಡೋಕ್ಕೆ ಕೊಟ್ಟು, ಮನೆಗೆ ಹೋಗಿ ದುಡ್ಡು ತರೋದು ಅಂತ ಮಾತು ಆಗಿತ್ತು. ಸರಿ ಸೈಕಲ್ ಶಾಪಿಗೆ ಹೋದಾಗ ಅಲ್ಲಿ ನನ್ನ ಅತ್ತೆಯ ಮಗ ಅಕಸ್ಮಾತ್ ಸಿಕ್ದ. ಆ ಸೈಕಲ್ ಶಾಪಿನವನು ಮತ್ತು ನನ್ನ ಅತ್ತೆಯ ಮಗ ಎಲ್ಲ ಫ್ರೆಂಡ್ಸು. ಸರಿ ಏನಾಗಿದೆ ನೋಡೋಣ ಬಾ ಅಂತ ಅವನೇ ಕರ್ಕೊಂಡು ಹೋದಾಗ ತಿಳಿಯಿತು…ನನ್ನ ಸೈಕಲ್ಲಿಗೆ ೬(ಆರು) ಕಡೆ ಪಂಚರ್ ಆಗಿದೆ ಅಂತ.. ಸರಿ ೨.೫ ಇಂಟೂ ೬ = ೧೫ ರೂಪಾಯಿ ಆಗತ್ತೆ. ಅಷ್ಟೊಂದು ಎಲ್ಲಿಂದ ಅಪ್ಪ ತರೋದು…ಕೊನೆಗೆ ಹತ್ತು ರುಪಾಯಿಗೆ ಎಲ್ಲ ಆರೂ ಪಂಚರುಗಳನ್ನು ಹಾಕುವಂತೆ ಚೌಕಾಸಿ ನಡೆಯಿತು. ನಮ್ಮ ಅತ್ತೆಯ ಮಗನೇ ದುಡ್ಡು ಕೊಟ್ಟಿದ್ದ ಅನ್ಸತ್ತೆ..

ಇದೆಲ್ಲ ಇವತ್ತೇಕಪ್ಪ ನೆನಪಾಯ್ತು ಅಂದ್ರೆ, ಮೊನ್ನೆ ಸಂಜೆ ಹೀಗೆ ಆಫೀಸಿನಿಂದ ಮನೆಗೆ ಹೋದ ಮೇಲೆ ಸ್ವಲ್ಪ ಹೊತ್ತು ಸೈಕಲ್ ಹೊಡೆಯೋಣ ಅಂತ ಅನ್ನಿಸಿ ಸೈಕಲ್ ಹೊರಗೆ ತೆಗೆದಾಗ ಸೈಕಲ್ ಪಂಚರ್ ಆಗಿದೆ ಅನ್ನೋದು ಗೊತ್ತಾಯ್ತು. ಸರಿ ಅಂತ, ಸೈಕಲ್ ಪಂಚರ್ ಹಾಕಿಸೋಕ್ಕೆ ಹೋಗುವಾಗ, ಹೇಗಾದರೂ ಇರಲಿ ಅಂತ ಹತ್ತು ರೂಪಾಯಿ ಇಟ್ಟುಕೊಂಡು ಹೋಗಿದ್ದೆ. ಸರಿ, ಸೈಕಲ್ ಅಂಗಡಿಗೆ ಹೋಗಿ, ಎಷ್ಟಪ್ಪ ಪಂಚರ್ ಹಾಕೋಕ್ಕೆ ಅಂತ ಕೇಳಿದ್ರೆ….ಉತ್ರ ಏನು ಗೊತ್ತಾ.

೧೨ ರೂಪಾಯಿ.

ಬೆಲೆಗಳು ಜಾಸ್ತಿಯಾಗಿವೆ ಅಂತ ಗೊತ್ತಿತ್ತು. ಆದರೆ ಇಷ್ಟೊಂದು ಜಾಸ್ತಿಯಾಗಿದೆ ಅಂತ ತಿಳಿದಿರಲಿಲ್ಲ. ಟ್ಯೂಬ್ ಬರ್ಸ್ಟ್ ಆಗಿದೆ, ಹೊಸ ಟ್ಯೂಬ್ ಹಾಕ್ಬೇಕು, ೯೦ ರೂಪಾಯಿ ಅಂತ ಹೇಳ್ದ. ಬರ್ಸ್ಟ್ ಆದ್ರೂ ಪರ್ವಾಗಿಲ್ಲ, ದೊಡ್ಡ ಪಾಚ್ ಹಾಕಿ ಕೊಡು. ಅದೇ ಇರಲಿ ಅಂತ ಪಂಚರ್ ಹಾಕಿಸಿಕೊಂಡು, ಒಂದು ಅರ್ಧ ಗಂಟೆ ಸೈಕಲ್ ಹೊಡೆದು ಮನೆಗೆ ಬಂದು ‘ಬೂಸ್ಟು’ ಕುಡಿದೆ.

ಹೌದು. ಬೆಲೆಗಳು ನಿಜಕ್ಕೂ ಗಗನಕ್ಕೇರಿವೆ. ಖರ್ಚು ಕಡ್ಮೆ ಮಾಡ್ಬೇಕು.

Advertisements
This entry was posted in Uncategorized. Bookmark the permalink.

ಸೈಕಲ್ ಪಂಚರ್ ಪುರಾಣ ಗೆ ಒಂದು ಪ್ರತಿಕ್ರಿಯೆ

  1. ಮರುಕೋರಿಕೆ (Pingback): Tweets that mention ಸೈಕಲ್ ಪಂಚರ್ ಪುರಾಣ « Jinnu's Blog -- Topsy.com

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s