ಹದಿನಾಲ್ಕು ವರ್ಷಗಳ ನಂತರ ಅಲ್ಲಿಗೆ ಹೋದಾಗ…

ನೀವೆಲ್ರೂ ಒಂದು ಹಾಡು ಕೇಳೇ ಇರ್ತೀರಾ… “ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ”… ಕಾಕತಾಳೀಯವೋ ಏನೋ, ನಾನೂ ಕೂಡ ಹದಿನಾಲ್ಕು ವರುಷಗಳ ನಂತರ ಒಂದು ಕಡೆ ಹೋಗಿದ್ದೆ. ಯಾರಾದ್ರು ನನ್ನನ್ನು ಕಾಡಿಗೋ ಅಥ್ವಾ ಇನ್ನೆಲಿಗೋ ಅಟ್ಟಿದ್ರಾ ಅಂದ್ಕೊಳ್ಬೇಡಿ.

ಬಹುಶಃ ನಾನು ಆರನೆಯ ತರಗತಿಯೋ ಅಥ್ವಾ ಏಳನೆಯ ತರಗತಿಯೋ ಏನೋ ನಮ್ಮಪ್ಪ ಹೇಳಿದ್ರು, ‘ನೀನು ಫಸ್ಟ್ ಬಂದ್ರೆ ಜನತಾ ಹೋಟೇಲಿಗೆ ಕರೆದುಕೊಂಡು ಹೋಗ್ತೀನಿ’ ಅಂತ. ಏಳನೆಯ ತರಗತಿಯಲ್ಲಿ ಫಸ್ಟು ಬರಲೇ ಇಲ್ಲ. ಆದ್ರೂ ನಮ್ಮಪ್ಪ ಜನತಾ ಹೋಟೇಲಿಗೆ ಕರೆದುಕೊಂಡು ಹೋಗಿ ಒಂದು ದೋಸೆ ಕೊಡ್ಸಿದ್ರು. ಇದಾಗಿ ನಾವು ಮಲ್ಲೇಶ್ವರವನ್ನು ಬಿಟ್ಟು ಎಷ್ಟೋ ವರುಷಗಳಾಗಿವೆ. ನೆನಪುಗಳು ಹಸಿರಾಗಿವೆ. ಆದರೆ ನನಗೆ ಈ ಜನತಾ ಹೋಟೇಲ್ ಅಷ್ಟೇನು ಕಾಡಿದ್ದಿಲ್ಲ. ಬಹುಶಃ ನಾನು ಅಷ್ಟು ಆಚೆಕಡೆ ತಿನ್ನುತ್ತಿರಲಿಲ್ಲವಾದ್ದರಿಂದ ಇರಬೇಕು. ಅದೂ ಅಲ್ಲದೆ, ಈ ಜನತಾ ಹೋಟೇಲ್ ಇರೋದೂ, ನಾನು ಓದಿದ ಸ್ಕೂಲ್ ರಸ್ತೆಯಲ್ಲಿಯೇ.

ಇದಾಗಿ ಎಷ್ಟೋ ಬಾರಿ ನಾನು ಮಲ್ಲೇಶ್ವರಕ್ಕೆ ಹೋಗಿ ಬಂದಿದ್ದರೂ, ‘ಜನತಾ ಹೋಟೇಲಿಗೆ’ ಹೋಗಿರಲಿಲ್ಲ. ಬಹುಶಃ ‘ಶಾಲೆಯ ಹತ್ತಿರ ಏನೂ ತಿನ್ನಬಾರದು’ ಅಂತ ನನಗೆ ಕಲಿಸಿದ್ದರಿಂದಲೋ ಏನೋ ನನಗೇನು ಇದರ ಬಗ್ಗೆ, ನಾಸ್ಟಾಲ್ಜಿಯಾ ಆಗ್ಲೀ, ಸೆಳೆತ ಆಗ್ಲೀ ಈ ಜನತಾ ಹೋಟೇಲ್ ಬಗ್ಗೆ ಇರಲಿಲ್ಲ. ಅಷ್ಟಕ್ಕೂ ನಾನು ಇಲ್ಲಿ ತಿಂದಿದ್ದಿದ್ದು, ನಮ್ಮಪ್ಪ ಕೊಡಿಸಿದ್ದ ಆ ಒಂದು ದೋಸೆ, ಮತ್ತೊಮ್ಮೆ ನಮ್ಮ ಅತ್ತೆಯ ಮಗಳ ಭಾವ ಕೊಡಿಸಿದ್ದ ಇಡ್ಲಿ (ವಿಥೌಟ್ ವಡೆ).

ಕಳೆದ ಭಾನುವಾರ ಮಲ್ಲೇಶ್ವರ ೮th ಕ್ರಾಸಿಗೆ ಹೋಗಿದ್ದೆ. ಗಾಡಿಯನ್ನು ನಿಲ್ಲಿಸಿ, ನಮ್ಮ ಶಾಲೆಯ ರಸ್ತೆಯ ಬದಿಯಲ್ಲಿ ನಡೆಯುತ್ತಾ ಹೋಗುತ್ತಿದ್ದೆ. ಹಳೇ ಕಾಲದ ಒಂದೆರೆಡು ಮನೆಗಳಿಗೆ ಸುಣ್ಣಬಣ್ಣವಾಗಿತ್ತು. ನಾನು ಸ್ಕೂಲಿನಿಂದ ಮನೆಗೆ ಹೋಗುವ ದಾರಿಯಲ್ಲಿ ದಿನವೂ ನೋಡುತ್ತಿದ್ದ, ಒಂದು ಹಿಪ್ಪುನೇರಳೆ ಮರ ಮಾಯವಾಗಿ ಆ ಜಾಗದಲ್ಲಿ ಒಂದು ಅಪಾರ್ಟಮೆಂಟ್ ಬಂದಿತ್ತು. ಸರಿ ಸುಮಾರು ಸಂಜೆ ೭:೪೫ ಸಮಯಕ್ಕೆ ಮನೆಗೆ ಹಿಂದಿರುಗುವ ಅಂತ ಮಾಡಿ ಗಾಡಿಯೆಡೆಗೆ ನಡೆಯುತ್ತಿದ್ದಾಗ, ಜನತಾ ಹೋಟೇಲ್ ಕಣ್ಣಿಗೆ ಬಿತ್ತು. ಜನರೂ ಅಷ್ಟಾಗಿ ಇರಲಿಲ್ಲವಾದ್ದರಿಂದ ಒಳ ನಡೆದೆ. ಇಲ್ಲಿ ವಿಶೇಷ ಏನಪ್ಪ ಆಂದ್ರೆ. ಸೀಟ್ ಖಾಲಿಯಾಗುವ ತನಕ, ಜನರನ್ನು ಹೋಟೇಲ್ ಒಳಗಡೆ ಬಿಡುವುದಿಲ್ಲ. ವಿದ್ಯಾರ್ಥಿ ಭವನದಲ್ಲಿ ಜನರು ನಮ್ಮ ಪಕ್ಕದಲ್ಲಿಯೇ ನಿಂತು ಕಾಯುತ್ತಿರುತ್ತಾರೆ, ಅಲ್ವೇ. ಇರಲಿ.

ಸರಿ ನನ್ನ ಸರದಿಯೂ ಬಂತು. ಒಂದು ಗೋಳಿಬಜೆ, ಒಂದು ಗರಿಗರಿ ಮಸಾಲೆ ದೋಸೆ ತಿಂದು, ಯಾವತ್ತೂ ಕುಡಿಯದ ಕಾಫಿಯನ್ನೂ ಹೀರಿ ಮನೆಯೆಡೆಗೆ ನಡೆದೆ. ಗೋಳಿಬಜೆ ಮತ್ತು ಮಸಾಲೆ ದೋಸೆ ಎರಡೂ ಚೆನ್ನಾಗಿತ್ತು. ಆಗ ಯೋಚಿಸಿದೆ ನಾನು ಈ ಹಿಂದೆ ಇಲ್ಲಿಗೆ ಯಾವಾಗ ಬಂದಿದ್ದು ಅಂತ. ಕನಿಷ್ಟ ಪಕ್ಷ ಹದಿನಾಲ್ಕು ವರುಷವಾದರೂ ಆಗಿರಲೇಬೇಕು.

ಆ ರಾಮ, ಲಕ್ಷ್ಮಣರು ಹದಿನಾಲ್ಕು ವರುಷದ ನಂತರ ಅಯೋಧ್ಯೆಗೆ ಹಿಂದಿರುಗಿದರೆ, ನಾನು ಹದಿನಾಲ್ಕು ವರುಷಗಳ ನಂತರ ‘ಜನತಾ ಹೋಟೇಲಿನಲ್ಲಿ’ ದೋಸೆ ತಿಂದೆ ಮನೆಗೆ ಹಿಂದಿರುಗಿದೆ

Advertisements
This entry was posted in ಕ್ಪಪು ಬಿಳುಪು, Uncategorized and tagged , . Bookmark the permalink.

4 Responses to ಹದಿನಾಲ್ಕು ವರ್ಷಗಳ ನಂತರ ಅಲ್ಲಿಗೆ ಹೋದಾಗ…

 1. Aravinda ಹೇಳುತ್ತಾರೆ:

  ಹ ಹಾ … ಒಳ್ಳೆ ಕತೆ 😛

  ಇನ್ನೊಂದ್ಸಲ ಮಲ್ಲೇಶ್ವರಂ ಗೆ ಬಂದರೆ ನನಗೆ ಫೋನಾಯ್ಸಿ , ಸಿಗೋಣವಂತೆ (ಇನ್ನು ೧೪ ವರ್ಷ ಬಿಟ್ಟು ಅಂತ ಹೇಳ್ಬೇಡಿ ಅಷ್ಟೇ 🙂 )

  ಹಂಗೇ ನಮಗೂ ದೋಸೆ ಗೀಸೆ ಕೊಡ್ಸಿ

  Like

  • jinnu ಹೇಳುತ್ತಾರೆ:

   ಅಗತ್ಯವಾಗಿ,

   ಒಂದು ವಿಚಾರ್ ಏನಪ್ಪಾ ಅಂದ್ರೆ, ೧೪ ವರ್ಷಗಳ ಹಿಂದೆಯೂ ಅಲ್ಲಿ ಸಿಕ್ಕಾಪಟ್ಟೆ ಜನ ಇರ್ತಾ ಇದ್ರು. ಆದ್ರೆ ಇಂದು ಅದರ ಹತ್ತು ಪಟ್ಟು ಆಗಿದೆ. ಕಡೇಪಕ್ಷ ಗಾಡಿಯಲ್ಲಿ ಕಷ್ಟಪಟ್ಟಾದರೂ ಹೋಗಬಹುದಿತ್ತು. ಆದರೆ ಕಳೆದ ಭಾನುವಾರ ಹೋದಾಗ, ಜಾತ್ರೆ ಅಥವಾ ಸಂತೆಗೆ ಹೋದ ಅನುಭವವಾಗ್ತಾ ಇತ್ತು. ನಿತ್ಯಜಾತ್ರೆ ಮಲ್ಲೇಶ್ವರ ೮ನೇ ಕ್ರಾಸ್ 😉

   Like

 2. jinnu ಹೇಳುತ್ತಾರೆ:

  ಓ ಸಿ ಶ್ರೀಧರ ಅವರೆ, ನಿಮ್ಮ ಮಾತುಗಳಿಗೆ ನನ್ನಿ.

  ಅಂದಹಾಗೆ, ನಾನು ಈ ಬರಹ ಬರೆದು ಅದಾಗಲೇ, ೫ ವರ್ಷವಾಗಿದೆ. ಇದರ ಮಧ್ಯೆ ಜನತಾ ಹೊಟೇಲಿಗೆ ಮತ್ತೆ ಹೋಗಿಲ್ಲ !!!!

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s