ಹೂವು ಹಾಡುಗಳು

ಹೋದ ವರ್ಷ ಸಂಪದದಲ್ಲಿ ನಡೆದಿದ್ದ ಆಟ. ತುಂಬಾ ಮಜಾ ಬಂದಿತ್ತು, ಈ ಆಟದಲ್ಲಿ.

೧. ಹೂಮಳೆ ಹೂಮಳೆ ಹೂಗಳ ಸುರಿಮಳೆ, ಸಪ್ತವರ್ಣಗಳ ಛಾಯೆಯೋ, ಮೇಘಮಿಂಚುಗಳ ಮಾಯೆಯೋ – ಹೂಮಳೆ
೨. ಹೂವ ರೋಜಾ ಹೂವ, ಹೂವ ನನ್ನ ಜೀವ. ಹೂವ ಮಲ್ಲಿಗೆ ಹೂವ, ಹೂವ ನನ್ನ ಜೀವ – ಕಲಾವಿದ
೩. ಹೂವೇ ಹೂವೇ , ಹೂವೇ ಹೂವೇ, ಹೂವೇ …ನಿನ್ನ ನಗುವಿಗೆ ಕಾರಣವೇನೇ ? ಸೂರ್ಯನ ನಿಯಮಾನಾ..ಓ…ಚಂದ್ರನ ನೆನಪೇನೇ ? – ಎಚ್೨ಓ
೪. “ಮಣಿ, ಮಣಿ, ಮಣಿ, ಮಣಿ, ಮಣಿಗೊಂದು ದಾರ” —– ಕನಕ, ಕನಕ ಹೆಸ್ರು ಚೆನ್ನಾಗಯ್ತೇ… – ಜನುಮದ ಜೋಡಿ
೫. ಚೆಂದ ಚೆಂದ ಗುಲಾಬಿ ತೋಟವೆ ಚಂದ, ಅಂದ ಅಂದ, ಸಂಗಾತಿ ನೋಟವೆ ಅಂದ – ಮಾನಸಸರೋವರ
೬. ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ…ಏನೆಂದು ಕೇಳಲು ಹೇಳಿತು, ಜೇನಂತ ಸಿಹಿನುಡಿಯಾ. – ಶುಭಮಂಗಳು
೭. ಅನುರಾಗ ತೋಟದಲ್ಲಿ, ಹೂವಂತೆ ನಾನು, ಆ ಹೂವ ಕಾಣಬಯಸಿ ಕಾದಿರುವ ದುಂಬಿ ನೀನು – ಗಣೇಶನ ಗಲಾಟೆ
೮. ಈ ಗುಲಾಬಿಯು ನಿನಗಾಗಿ, ಇದು ಚೆಲ್ಲುವ ಪರಿಮಳ ನಿನಗಾಗಿ – ಮುಳ್ಳಿನ ಗುಲಾಬಿ
೯. ಓ ಗುಲಾಬಿಯೇ…ಓಓಓಓ ಗುಲಾಬಿಯೇ – ಓಂ
೧೦. ಬಾಳುವಂಥ ಹೂವೇ, ಬಾಡುವ ಆಸೆಯೇಕೇ ? ಹಾಡುವಂಥ ಕೋಗಿಲೆ… – ಆಕಸ್ಮಿಕ
೧೧. ಸಂಪಿಗೆ ಸಿದ್ದೇಶ ಮಾಯಕಾರ, ಸಂಪಿಗೆ ಹೂವಾಗಿ ನಿಂದೆಯಲ್ಲೋ – “ಸಂಪಿಗೆ ಸಂಪಿಗೆ ಕಾಮಗೇತಿ ಸಂಪಿಗೆ, ಪಾಳೆಗಾರ ವಂಶಕೆ ಸಿದ್ಧವಿದ್ದ ಸಂಪಿಗೆ” – ಕಲ್ಲರಳಿ ಹೂವಾಗಿ
೧೨. ನೀನೇ ಸಾಕಿದ ಗಿಳಿ – ಹೂವಾಗಿ ಅರಳಿ, ಹಾವಾಗಿ ಕೆರಳಿ. – ಮಾನಸ ಸರೋವರ
೧೩. ಚೆಲ್ಲಿದರು ಮಲ್ಲಿಗೆಯಾ ಬಾನ ಸೂರೇರಿಮ್ಯಾಗೆ – ಮಲೆಮಹದೇಶ್ವರನ ಹಾಡು.
೧೪. ಎಲ್ಲಾದರು ಇರು, ಎಂತಾದರು ಇರು(ಮಲ್ಲಿಗೆ ಸಂಪಿಗೆ, ಕೇದಗೆ, ಸೊಂಪಗೆ ಮಾವಿನ ಹೊಂಗೆಯ ತಳಿರಿನ ತಂಪಿಗೆ, ರಸರೋಮಾಂಚನಗೊಳುವ ತನುಮನ) – ರಾಜಣ್ಣನ ಆಲ್ಬಮ್ಮನಿಂದ
೧೫. ಸೇವಂತಿಯೇ ಸೇವಂತಿಯೇ, ನನ್ನಾಸೆ ಅಲೆಯಲ್ಲಿ ಘಮ್ಮಂತೀಯೇ – ಸೂರ್ಯವಂಶ
೧೬. ಕಲ್ಲರಳಿ ಹೂವಾಗಿ, ಹೂವರಳಿ ಹೆಣ್ಣಾಗಿ – ಕಲ್ಲರಳಿ ಹೂವಾಗಿ.
೧೭. ಕಮಲದ ಹೂವಿಂದಾ, ಕೆನ್ನೆಯ ಮಾಡಿದನೋ. – ಬಾಳು ಬೆಳಗಿತು
೧೮. ಕಮಲಾಕುಚಚೂಚುಕಕುಂಕುಮತೋನಿಯತಾರುಣಿತಾತುಲನೀಲತನೋ – ಚೆಲ್ಲಾಟ, ಶಾಸ್ತ್ರಗಾರರು ಮನ್ನಿಸಬೇಕು.
೧೯. ಯಾವ ಹೂವ ಯಾರ ಮುಡಿಗೋ, ಯಾರ ಒಲವು ಯಾರ ಕಡೆಗೋ – ಯಾವ ಹೂವ ಯಾರ ಮುಡಿಗೋ(??)
೨೦. ಯಾವ ಮೋಹನ ಮುರಳಿ ಕರೆಯಿತು, ದೂರ ತೀರಕೆ ನಿನ್ನನು(ಹೂವು ಹಾಸಿಗೆ, ಚಂದ್ರ, ಚಂದನ ಬಾಹು ಬಂಧನ ಚುಂಬನ) – ಅಮೇರಿಕಾ ಅಮೇರಿಕಾ
೨೧. ನಮ್ಮೂರ ಮಂದಾರ ಹೂವೆ, ನನ್ನೊಲುಮೆ ಬಾನ್ದಳೆದ ಚೆಲುವೆ – ಆಲೆ ಮನೆ
೨೨. ಜೇನಿನ ಹೊಳೆಯೋ, ಹಾಲಿನ ಮಳೆಯೋ, ಸುಧೆಯೋ ಕನ್ನಡ ಸವಿನುಡಿಯೋ(ಮಲ್ಲಿಗೆ ಹೂಗಳು ಅರಳಿದ ಹಾಗೆ) – ಚಲಿಸುವ ಮೋಡಗಳು
೨೩. ಮಂದಾರ ಪುಷ್ಪವು ನೀನು, ಸಿಂಧೂರ ಪ್ರತಿಮೆಯು ನೀನು. – ರಂಗನಾಯಕಿ
೨೪. ಗೀತಾಂಜಲಿ ಬಾರೆ ಸಂಪಿಗೆ. – ಗೀತಾಂಜಲಿ
೨೫. ನನ್ನಾಸೆಯಾ, ಹೂವೆ, ಬೆಳದಿಂಗಳಾ ಚೆಲುವೆ(ನಾ ನಿನ್ನ ಮರೆಯಲಾರೆ)
೨೬. ಜಾಜಿ ಮಲ್ಲಿಗೆ ನೋಡೆ, ಸೂಜಿಗ ಹೂವೆ ನೋಡೆ. – ಸೇವಂತಿ ಸೇವಂತಿ
೨೭. ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು (ಪದುಮಳು ಬಂದಳು, ಹೂವನು ಮುಡಿಯುತ ರಾಯರ ಕೋಣೆಯಲಿ) – ಮೈಸೂರು ಮಲ್ಲಿಗೆ
೨೮. ಸಾಗಲಿ ತೇಲಿ ತರಂಗದೊಳು, ಓಹೋ ಜಗವೇ ತೂಗೆನುತಾ, ದೋಣಿಯು ತಾ ತೂಗೆನುತ(ಸುಮ-ಸುಮ ತೀಡಿ ವಿಕಸನಗೈದ ಬಂದವಾಯುವಾಲಿಂಗನದೋಳ್) – ಮಾಯಾಬಜಾರ್
೨೯. ಅರಳಿದೆ, ಅರಳಿದೆ, ಮುದುಡಿದ ತಾವರೆ ಅರಳಿದೆ. ಬಯಸಿದೆ, ಬಯಸಿದೆ, ಪ್ರಿಯತಮನಾಸರೆ ಬಯಸಿದೆ. – ಮುದುಡಿದ ತಾವರೆ ಅರಳಿತು.
೩೦. ಬಿಸಿಲೇ ಬರಲಿ, ಮಳೆಯೇ ಬರಲಿ, ಕಾಡಲ್ಲಿ ಮೇಡಲ್ಲಿ ಅಲೆವೇ. Sun let let come, Rain Let let come, forest mountain I go roaming. ಶರ್ಲಿ ಮೇಡಮ್ಗಾಗಿ ಕೊಡಲು ಬೆಟ್ಟದ ಹೂವಾ ತರುವೆ. Oh, Sherli madam giving mountain flower bringing 🙂 – 🙂 – ಬೆಟ್ಟದ ಹೂವು
೩೧. ಕಮಲದ ಕಣ್ಣೋಲೆ, ಕಮಲದ ಮೊಗದೋಳೆ, ಕಮಲವ ಕೈಯಲ್ಲಿ ಹಿಡಿದೋಳೆ. – ಹೊಸ ಇತಿಹಾಸ
೩೨. ಓಡುವ ನದಿ ಸಾಗರವ ಸೇರಲೆಬೇಕು(ಬಂಗಾರದ ಹೂವೆ ನೀನು ನಗುತಿರಬೇಕು). – ಬಂಗಾರದ ಹೂವು(??)
೩೩. ಚಿನ್ನದ ಮಲ್ಲಿಗೆ ಹೂವೆ, ಬಿಡು ನೀ ಬಿಂಕವ ಚೆಲುವೆ – ಹುಲಿಯ ಹಾಲಿನ ಮೇವು
೩೪. ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ, ತಾಯಿ ಮಡಿಲಿನಲಿ ಬೀಡುಬಿಟ್ಟ ಮುದ್ದು ಕೋಳಿ. – ಭಾವಗೀತೆ
೩೬. ಅರಳೆರಾಶಿಗಳಂತೆ, ಹಾಲ್ಗಡಲ ಅಲೆಯಂತೆ ಆಗಸದೇ ತೇಲುತಿದೆ ಮೋಡಾ(ಅಪಾರಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು, ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು) – ವಿಜಯನಗರದ ವೀರಪುತ್ರ
೩೭. ಬಾಡಿ ಹೋದ ಬಳ್ಳಿಯಿಂದ, ಹೂವು ಅರಳಬಲ್ಲದೇ. – ಎರಡು ಕನಸು
೩೮. ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು. – ಉಪಾಸನೆ
೩೯. ಹೂವು ಹೊರಳುವವು, ಸೂರ್ಯನ ಕಡೆಗೆ, ನಮ್ಮ ದಾರಿ ಬರಿ ಚಂದ್ರನ ಕಡೆಗೆ. – ಚನ್ನವೀರ ಕಣವಿಯವರ ಕವನ
೪೦. ನಗುವ ಗುಲಾಬಿ ಹೂವೇ. – ಆಟೋ ರಾಜ
೪೧. ನೀ ನಡೆವ ಹಾದಿಯಲ್ಲಿ ನಗೆಹೂವು ಬಾಡದಿರಲಿ. – ಬಂಗಾರದ ಹೂವು
೪೨. ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ. – ಮೈಸೂರು ಮಲ್ಲಿಗೆ
೪೩. ಆ ಮೊಗವು, ಎಂಥ ಚೆಲುವು, ಮನವ ಸೆಳೆವ, ಬಂಗಾರದ ಹೂವು. – ಬಂಗಾರದ ಹೂವು
೪೪. ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧ ಚೆಲ್ಲಿ – ಉಪಾಸನೆ
೪೫. ಮಂಜು ಮಂಜು ಬೆಳ್ಳಿ ಮಂಜು, ಮಂಜಿನ ರೇಶಿಮೆ ರಾಶಿಯಲಿ(ಆ ಸಂಪಿಗೆ ಹೂ ಹೋಲುವ ನಾಜೂಕಿನ ಈ ಮೂಗಿನ ಅಂದದಾ) – ಹೂವು ಹಣ್ಣು
೪೬. ಚೈತ್ರದ ಪ್ರೇಮಾಂಜಲಿಯ ಸುಮ, ಸುಮ, ಸುಮ. ಗಂಧದ ಪರಿಮಳಕಿಂತ ಘಮ, ಘಮ, ಘಮ. – ಚೈತ್ರದ ಪ್ರೇಮಾಂಜಲಿ
೪೭. ಘಮ, ಘಮಾಡಿಸ್ತಾವ ಮಲ್ಲಿಗೀ, ನೀ ಹೊರಟಿದ್ದೀಗ ಎಲ್ಲಿಗಿ – ಸಂಗೀತಾ ಕಟ್ಟಿಯವರ ಆಲ್ಬಮ್
೪೮. ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ, ಯಾಕಿಂಗೆ ಓಡ್ತೈತೋ(ಹೂವುಹಣ್ಣುಯಿಟ್ಟು ನಿಂಗಾರ್ತಿ ಎತ್ತಬೇಕಾ ?)
೪೯. ನಿನ್ನ ಕಂಡ ಕ್ಷಣದಿಂದ ನಾನು ನನ್ನೊಳಿಲ್ಲ(ಆ ಬೆಟ್ಟದ ಹೂವು ಬೇಕಾ, ಆಕಾಶದ ತಾರೆ ಬೇಕಾ, ಬೇರೇನು ಬೇಕು ಹೇಳು ನೀ ಎಲ್ಲಾನು ಕೊಡುವೆ, ಕೊಡುವೆ) – ಅರಸು
೫೦. ಎಲ್ಲಿಂದ ಬಂತು ಈ ತಂಗಾಳಿ, ಕಾರಣವೇನೇ ಸಖಿ. ಮಲ್ಲಿಗೆ ನರುಗಂಪು ಎಲ್ಲೆಲ್ಲು – ಆಕ್ಸಿಡೆಂಟ್.
೫೧. ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು – ಮಂಕುತಿಮ್ಮನ ಕಗ್ಗದಿಂದ.
೫೨. ತಾವರೆ ಹೂ ಕ್ಯಾಬರೆಗೆ.
೫೩. ಕಣ್ಣುಗಳೇ ಕಮಲಗಳು, ಮುಂಗುರುಳೇ ದುಂಬಿಗಳು, ಕವಿನುಡಿಯಿದು ನಿಜವೈ ಕಲ್ಪನೆಯು ಅಲ್ಲವೈ
೫೪. ಕನಕ, ಕನಕ, ಓ ಕನಕ, ಬಾರೆ ಜೊತೆಗೆ ಮನೆ ತನಕ.
೫೫. ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ (ನಾಸಿಕವು ಸಂಪಿಗೆಯಂತೆ) – ಕವಿರತ್ನ ಕಾಳಿದಾಸ.
೫೬. ಮಾತು ಮುರಿದೆ, ಮಾತಾಡದೆ, ಮೋಹಕ ಮೋಸವ ಮಾಡಿದೆ (ಕಳ್ಳಿ ಹೂ ಪೂಜೆಗಲ್ಲ, ಕಾಳಿಂಗ ಸಾಕಲಲ್ಲ) – ಗಂಡ ಹೆಂಡತಿ ಅಂಡ್ ಬಾಯಫ್ರೆಂಡ್.
೫೭. ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೆ ನಾನು 😦 😦 – ಹಾವಿನ ಹೆಡೆ
೫೮. ಹೂವಂತೆ ಹೆಣ್ಣು ನಗುತಿರಬೇಕು – ???
೫೯. ನನ್ನಾಸೆಯಾ ಹೂವೆ ಬೆಳದಿಂಗಳಾ ಚೆಲುವೆ, ನಿನ್ನೊಲವಿಗೆ ಸೋತೆನು, ಸೋತೆನು, ಆಆಆಆ –
೬೦. ಮುಗಿಲ ಮಲ್ಲಿಗೆಯೋ, ಗಗನದ ತಾರೆಯೋ – ???
೬೧. ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ – ಗಾಂಧಿ ನಗರ
೬೨. ಗಡಿಬಿಡಿ ಗಂಡ ನೀನು, ಚಿನ್ನಾ ನಿನ ಕಯ್ಯಿ, ಸಿಡಿಮಿಡಿ ಹೆಂಡ್ತಿ ನೀನು, ಹೂವ ನಿನ್ನ ಮಯ್ಯಿ 😉 – ಗಡಿಬಿಡಿ ಗಂಡ
೬೩. ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ. (ಕೇದಗೆ ಗರಿಯಂಥ ನಿನ್ನ…) – ಮಿಲನ
೬೪. ಅಡವಿ ದೇವಿಯ ಕಾಡು ಜನಗಳ ಈ ಹಾಡು, ನಾಡಿನ ಜೀವ ತುಂಬಿದೆ (ಕಾಡು ಮಲ್ಲಯ್ಯಂಗೆ ಜೇನು ಕಿತ್ತು ಪೂಜೆಕೊಟ್ಟು, ಜಾಜಿ ಮಲ್ಲೆ ತಂದು ದೇವಮ್ಮಂಗೆ ಮಾಲೆಯಿಟ್ಟು) – ರಾಯರು ಬಂದರು ಮಾವನ ಮನೆಗೆ
೬೨. ಏಏಏಏ, ಮಲ್ಲೆ, ನೀ ಮುದ್ದು ಮುದ್ದು ಜಲ್ಲೆ. ಭೂಮಿಮ್ಯಾಗೆ ನಾನಿಲ್ಲ, ಮನಸು ಕೈಗೇ ಸಿಕ್ತಿಲ್ಲ, ನೋಡ್ತಾಳವಳು, ನನ್ನೈ ಕಾಡ್ತಾಳವಳು. ಜಿಂಕೆ ಮರೀನಾ, ನೀ ಜಿಂಕೆ ಮರೀನಾ, ನೀ ಜಿಂಕೆ ಜಿಂಕೆ ಮರೀನಾ.

Advertisements
This entry was posted in Uncategorized. Bookmark the permalink.

ಹೂವು ಹಾಡುಗಳು ಗೆ ಒಂದು ಪ್ರತಿಕ್ರಿಯೆ

  1. ಮರುಕೋರಿಕೆ (Pingback): ಹೂವು ಹಾಡುಗಳು | indiarrs.net Featured blogs from INDIA.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s