ಹಿರಣ್ಯಮಯೇನ ಪಾತ್ರೇಣ

ನಾನು ಚಿಕ್ಕವನಿದ್ದಾಗ ಒಮ್ಮೆ ಮಿಡ್- ಟರ್ಮ್ ರಜೆಗೆ ಯೋಗಾ ಕ್ಲಾಸಿಗೆ ಸೇರಿದ್ದೆ. ಆಗ, ಸೂರ್ಯನಮಸ್ಕಾರ ಮಾಡಿಸುವಾಗ ಈ ಶ್ಲೋಕವನ್ನು ಹೇಳಿಸುತ್ತಿದ್ದರು.

ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ |ತತ್ತ್ವಂ ಪೂಷನ್ ಅಪಾವೃಣು ಸತ್ಯಧರ್ಮಾಯ ದೃಷ್ಟಯೇ

ತಾತ್ಪರ್ಯ – ಪೂಷನ್, ಹಿರಣ್ಮಯೇನ ಪಾತ್ರೇಣ ಸತ್ಯಸ್ಯ ಮುಖಂ ಅಪಿಹಿತಂ, ಸತ್ಯಧರ್ಮಾಯ ದೃಷ್ಟಯೇ ತತ್ ತ್ವಂ ಅಪಾವೃಣು.

ಅರ್ಥ – ನೇಸರನೆ, ಚಿನ್ನದಂತಹ ಮುಚ್ಚಳದಿಂದ ಸತ್ಯದ ಮೊಗವು ಮುಚ್ಚಲ್ಪಟ್ಟಿದೆ. ಸತ್ಯಧರ್ಮವನ್ನು ನೋಡವುದಕ್ಕಾಗಿ ನೀನು ಅದನ್ನು ಸರಿಸು.

ಆಗ ತಿಳಿದಿದ್ದ ಅರ್ಥವೆಂದರೆ ಇದು ಸೂರ್ಯನನ್ನು ಕುರಿತಾದ ಶ್ಲೋಕ(ಈಗ ಯಾರಾದರೂ ಕೇಳಿದರೆ, ಇದನ್ನು ಪದ್ಯ ಎಂದು ಹೇಳುತ್ತೇನೆ 😉 ) ಎಂಬುದಾಗಿ. ನಂತರ ತಿಳಿದದ್ದು, ಈ ಪದ್ಯ ಈಶಾವಾಸ್ಯೋಪನಿಷತ್ತಿನಲ್ಲಿ ಬರುತ್ತದೆ ಎಂಬುದಾಗಿ. ಪೂಷನ್ ಎಂದರೆ ಸಮೃದ್ಧಿಯನ್ನು ತರುವವನು ಎಂದರ್ಥ. ಈಶಾವಾಸ್ಯೋಪನಿಷತ್ತಿನಲ್ಲಿ ಈ ಪದ್ಯದ ನಂತರ ಇದರ ಮುಂದುವರಿಕೆಯ ಭಾಗವಾಗಿ ಮತ್ತೊಂದು ಪದ್ಯ ಬರುತ್ತದೆ. ಹಾಗೆ ನೋಡಿದರೆ, ಎರಡೂ ಪದ್ಯವನ್ನು ಒಟ್ಟಿಗೆ ಓದಬೇಕು. ಆದರೆ ಆಗ ಇದನ್ನು ಯಾರೂ ಹೇಳಿಯೇ ಕೊಟ್ಟಿರಲಿಲ್ಲ.

ಪದ್ಯ ಹೀಗೆ ಮುಂದುವರಿಯುತ್ತದೆ.

ಪೂಷನ್ನೇಕರ್ಷೇ ಯಮ ಸೂರ್ಯ ಪ್ರಾಜಾಪತ್ಯ ವ್ಯೂಹ ರಶ್ಮೀನ್ ಸಮೂಹ ತೇಜೋ |

ಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ ಯೋಸಾ(ಸೌ)ವಸೌ ಪುರುಷಃ ಸೋಹಮಸ್ಮಿ ||

ತಾತ್ಪರ್ಯ – ಪೂಷನ್ (ಏಕರ್ಷೇ, ಯಮ, ಸೂರ್ಯ, ಪ್ರಾಜಾಪತ್ಯ) ರಶ್ಮೀನ್ ವ್ಯೂಹ, ತೇಜಃ ಸಮೂಹ, ಯತ್ ಕಲ್ಯಾಣತಮಂ ತೇ ರೂಪಂ ತತ್ ತೇ ಪಶ್ಯಾಮಿ, ಅಸೌ ಅಸೌ ಪುರುಷಃ ಯಃ ಸಃ ಅಹಂ ಅಸ್ಮಿ ಅರ್ಥ – ಸೂರ್ಯನೆ (ಏಕಾಂಗಿಯಾಗಿ ಸಂಚರಿಸುವವನೆ, ಯಮನೆ, ಸೂರ್ಯನೆ, ಪ್ರಾಜಾಪತ್ಯನೆ) ಕಿರಣಗಳನ್ನು ಹರಡು, ತೇಜಸನ್ನು ಎಲ್ಲೆಡೆ ವಿಸ್ತರಿಸು, ಯಾವುದು ನಿನ್ನ ಮಂಗಳಕರರೂಪವೋ, ಆ ನಿನ್ನನ್ನು ನೋಡುತ್ತೇನೆ. ಆ ಆ ಪುರುಷನು ಯಾವನೋ, ಅವನು ನಾನೇ ಆಗಿದ್ದೇನೆ. ಇದರ ಅರ್ಥ ತುಂಬಾ ಸರಳ.

ಅಂದರೆ, ನನಗೆ ಸಮೃದ್ಧಿಯನ್ನು ತರುವವನು ನಾನೇ ಆಗಿದ್ದೇನೆ. ಆದರೆ ಅದು ನನಗೆ ಅರಿವಾಗುತ್ತಿಲ್ಲ. ನನ್ನನ್ನೇ ನಾನು ಕಂಡುಕೊಳ್ಳಬೇಕಿದೆ.

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s