ತಿಗಣೆ ಮಾರಣಹೋಮ

ಈ ಚಿತ್ರ ನೋಡಿ, ಯಪ್ಪಾ..ಅದೆಷ್ಟು ಭಯಂತರವಾಗಿ ನನಗೆ ಕಾಣಿಸುತ್ತೆ ಅಂದ್ರೆ, ಮೊನ್ನೆ ಭಾನುವಾರದಿಂದ ಊಟ ಸೇರುತ್ತಿಲ್ಲ, ನಿದ್ದೆ ಹತ್ತುತ್ತಿಲ್ಲ. ಅಲ್ಲ ಎಂಥೆಂಥ Bugsಗಳನ್ನೆಲ್ಲ Fixy ಬಿಸಾಕಿದ್ವಿ, ಆದ್ರೆ ಈ ಹಾಳು ಬೆಡ್-ಬಗ್ಗಿನಿಂದ ಮುಕ್ತಿ ಸಿಗುತ್ತಿಲ್ಲ.

ಕಳೆದ ಒಂದು ತಿಂಗಳಿಂದ ಅದ್ಯಾವ ಪರಿ ಇದು ನಮ್ಮನ್ನು ಮೆಟ್ಕೊಂಡಿದೆ ಅಂದ್ರೆ, ಅಯ್ಯಪ್ಪಾ ರಾತ್ರಿ ಆಯ್ತಲ್ಲಪ್ಪಾ, ನಿದ್ದೆ ಮಾಡ್ಬೇಕಲ್ಲಪ್ಪಾ ಅಂತ ಪರಿತಪಿಸುವಷ್ಟು ಬೇಸರವಾಗಿ ಹೋಗಿದೆ. ಎಷ್ಟೋ ಔಷಧಿ ಬಳಸಿದ್ದಾಯ್ತು. ಸರಿ, ಬಿಸಿಲಿಗೆ ಇಡೋಣ ಹಾಸಿಗೆಗಳನ್ನ ಅಂದ್ರೆ ಅದ್ಯಾಕೋ ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿಂದ ಅಷ್ಟು ಬಿಸಿಲೇ ಇಲ್ಲ.

ಮೊನ್ನೆ ಭಾನುವಾರ Direct Actionಗೆ ಇಳಿದ, ಹಾಸಿಗೆಯನ್ನ ಮಹಡಿಯ ಮೇಲೆ ತೆಗೆದುಕೊಂಡು ಹೋಗಿ, ಯದ್ವಾ ತದ್ವಾ ಕೊಡವಿದಾಗ, ಒಂದು ಬೊಗಸೆಯಷ್ಟು ತಿಗಣೆಗಳು ಸಿಕ್ಕಿದ್ವು. ಅವುಗಳನ್ನು ಅದ್ಯಾವ ಪರಿ ಸಾಯಿಸದೆ ಅಂದ್ರೆ, ಮಹಡಿಯ ಮೇಲೆ ಎಲ್ಲೆಲ್ಲೂ ರಕ್ತದೋಕುಳಿಯೋ ಓಕುಳಿ.

ಹಾಸಿಗೆಗೇನೋ ಒಂದು ಗತಿಯಾಯಿತು, ಇನ್ನು ಮಂಚ ನೋಡಿದರೆ, ಇದರ ಹತ್ತು ಪಟ್ಟು. ಮಂಚದಲ್ಲಿ ಇರುವ ಎಲ್ಲ ತೂತುಗಳಲ್ಲಿಯೂ ಮೊಟ್ಟೆಗಳು, ಮರಿಗಳು, ದೊಡ್ಡ ಗೊಡವ ತಿಗಣೆಗಳು. ಕೆಲವನ್ನು ಸುಟ್ಟಿದ್ದಾಯಿತು. ಕೆಲವಕ್ಕೆ Candle Wax ಮೆತ್ತಿದ್ದಾಯಿತು. ಕೊನೆಗೆ ಮಂಚಕ್ಕೆ ವಾರ್ನಿಶ್ ಬಳಿದು ಒಣಗಲು ಇಟ್ಟಿದ್ದೀವಿ. ಬಿಸಿಲೇ ಇಲ್ಲದ ಕಾರಣ ಇನ್ನೂ ಒಣಗಿಲ್ಲ.

ಎಂಥೆಂಥ ಕ್ರಿಮಿಕೀಟಗಳಿಂದ ಮುಕ್ತಿ ಪಡೆದಿದ್ವಿ. ಇಲಿ, ಜಿರಳೆ, ಜೇಡ. ಈಗ ಒಂದು ಸಣ್ಣ ತಿಗಣೆಗೆ ಹೆದರಿ ಹೆದರಿ ಸಾಯಬೇಕಾಗಿದೆ.

Advertisements
This entry was posted in Uncategorized. Bookmark the permalink.

6 Responses to ತಿಗಣೆ ಮಾರಣಹೋಮ

 1. srinivas ಹೇಳುತ್ತಾರೆ:

  now how u solved it pls tell me even v also in same stage

  Like

 2. nivedita ಹೇಳುತ್ತಾರೆ:

  please tell us how to solve this bed bugs.

  Like

 3. chaithra ಹೇಳುತ್ತಾರೆ:

  please tell us how to solve this bed bugs.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s