ಕನ್ನಡದಲ್ಲಿ ಬ್ರಿಟಿಷ್ ಸ್ತುತಿ ಗೀತೆಗಳು

ನೆನ್ನೆಯ ಪ್ರಜಾವಾಣಿಯಲ್ಲಿ ಒಂದು ಕುತೂಹಲಕರವಾದ ಮತ್ತು ಆಸಕ್ತಿದಾಯಕ ಲೇಖನವೊಂದು ಬಂದಿದೆ. ರಹಮತ್ ತರೀಕೆರೆ ಅವರದ್ದು. ಬ್ರಿಟೀಷರನ್ನು ಸ್ತುತಿಸುವ, ಸ್ವಾಗತಿಸುವ ಮೂರು ಬಗೆಯ ಗೀತೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಅದರಲ್ಲಿ, ಕನ್ನಡ ಕವಿಗಳು, ಬ್ರಟೀಷರನ್ನು ಹಾಡಿಹೊಗಳಿರುವ ಸಾಲುಗಳನ್ನು ಒಳಗೊಂಡು ಒಂದು ಲೇಖನ. ಬಿಡುವು ಮಾಡಿಕೊಂಡು ಓದಿ.
ಕನ್ನಡದಲ್ಲಿ ಬ್ರಿಟಿಷ್ ಸ್ತುತಿ ಗೀತೆಗಳು

೧. ಹೊಗಳಿಕೆಗೆ ಸೀಮಿತವಾದ ಸ್ತುತಿಗಳು. ಇವುಗಳಲ್ಲಿ ಭಾರೀ ಗಾತ್ರದ ಪದಗಳನ್ನು ಗುರುತಿಸಬಹುದು. “ವೈರಿವನಿತಾವೈಧವ್ಯದೀಕ್ಷಾಗುರು”, “ವೈರಿಗರ್ವನಿವರ್ತಿ”, “ಸದ್ಧರ್ಮನಿರತಂ”. ಈ ಬಗೆಯ ಸ್ತುತಿಗೀತೆಗಳನ್ನು ಬರೆದವರಲ್ಲಿ ದೇವಚಂದ್ರ, ಸಿಂಗ್ರಯ್ಯ ಮತ್ತು ಡಿ.ವಿ.ಜಿಯವರನ್ನು ಹೆಸರಿಸಿದ್ದಾರೆ. ಹಾಗೆಯೇ ಆನಂದ ಮಠ ಕಾದಂಬರಿ ಬರೆದ ಬಂಕಿಮಚಂದ್ರರನ್ನೂ ಉಲ್ಲೇಖಿಸಿದ್ದಾರೆ. ದೇವಚಂದ್ರ, ಸಿಂಗ್ರಯ್ಯ, ಡಿ.ವಿ.ಜಿಯವರು ಬರೆದಿರುವ ಸ್ತುತಿಗೀತೆಗಳು ಸಂಸ್ಕೃತಭೂಯಿಷ್ಠವಾಗಿವೆ. ಸಂಸ್ಕೃತ ಛಂದೋವೃತ್ತಗಳಲ್ಲಿ ಆಂಗ್ಲರ ಹೆಸರುಗಳನ್ನು ಉದಾಹರಿಸಿದ್ದಾರೆ.

ಉದಾ: ಶ್ರೀಮಜ್ಜಾರ್ಜ್ವಿಭು, ಶ್ರೀಮೇರೀ ರಮಣೀಮಣೀಹೃದಯರಾಜೀವಾರ್ಕನಿಂದ್ರೋಪಮಂ

ಹಾಗೆಯೇ, ಇಲ್ಲಿ ವೈರಿ ಯಾರು ಎಂಬುದು ಸ್ಪಷ್ಟವಾಗಿಲ್ಲ, ಏಕೆಂದರೆ ಬ್ರಿಟಿಷರಿಗೆ ಕೇವಲ ಫ್ರೆಂಚರು ವೈರಿಗಳಾಗಿರದೆ, ಟೀಪು, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರೂ ಇದ್ದಾರೆ. ಹಾಗಾಗಿ ವೈರಿವನಿತಾವೈಧವ್ಯದೀಕ್ಷಾಗುರು, ವೈರಿಗರ್ವನಿವರ್ತಿ ಮುಂತಾದ ವಿಶೇಷಣಗಳು ತುಂಬಾ ಮುಜುಗರವೆನಿಸುತ್ತವೆ.

೨. ಬ್ರಿಟೀಷರ ರಾಜಕೀಯ ಆಳ್ವಿಕೆಯಿಂದ ಆದ ಸಾಮಾಜಿಕ ಪರಿಣಾಮಗಳನ್ನು ಕಲೆಹಾಕಿದ ಕೆಲವರಲ್ಲಿ ಬಿ.ಎಂ.ಶ್ರೀ, ರಾಜಾರಾಮ್ ಮೋಹನ್ ರಾಯ್, ಸಾಹು ಮಹಾರಾಜ್, ಕುವೆಂಪು ಇವರುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

೩. ಹಾಗೆಯೇ, ತರೀಕೆರೆಯವರು ಮುಂದುವರೆದು , ಮತ್ತೊಂದು ಬಗೆ ಸ್ತುತಿಗೀತೆಯ ಬಗ್ಗೆ ಬೆಳಕು ಚೆಲ್ಲುತ್ತಾರೆ. ಆ ಸ್ತುತಿಗೀತೆಗಳು ಬ್ರಿಟಿಷರ ಮೇಲಿರದೆ ಅವರ ಮೇಲೆ ಹೋರಾಡಿ ಮಡಿದ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಇಂತಹವರ ಮೇಲೆ. ಆದರೆ ಇಂತಹವು ಹೆಚ್ಚಾಗಿ ಜನಪದ ಲಾವಣಿಗಳಲ್ಲಿ ದೊರೆಯುತ್ತವೆ.

ಮೂರನೆಯದಕ್ಕೂ ಮೊದಲನೆಯದಕ್ಕೂ ಎಂತಹ ವಿರೋಧಾಭಾಸ ಅಲ್ಲವೇ ?

Advertisements
This entry was posted in Eulogy on British Rule in India, Kannada Eulogy, Kannada Poets on British. Bookmark the permalink.

ಕನ್ನಡದಲ್ಲಿ ಬ್ರಿಟಿಷ್ ಸ್ತುತಿ ಗೀತೆಗಳು ಗೆ 2 ಪ್ರತಿಕ್ರಿಯೆಗಳು

  1. Ganesh K ಹೇಳುತ್ತಾರೆ:

    Thanks for giving interesting facts.

    Ganesh.

  2. ಮರುಕೋರಿಕೆ (Pingback): Ideology of Sanskrit Hate in Karnataka | Sanskrit-Animus Begotten of Sin

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s