ಜೇನುಗೂಡಿನ ಮೊದಲ ಗಿಡ

ನಾವು ಜೇನುಗೂಡನ್ನು ಕಟ್ಟಿಸುವಾಗ ಎಲ್ಲರಿಗೂ ಇದ್ದ ಒಕ್ಕೊರಲಿನ ಆಸೆಯೆಂದರೆ ಗಿಡ ಹಾಕೋಕ್ಕೆ ಜಾಗ ಇರಬೇಕು ಅಂತ. ನಮ್ಮ ಮನೆ ಆಗಿನ್ನೂ ಸೆಟ್ಟೇರಿರಲಿಲ್ಲವಾದರೂ ಆಗಲೇ ಎಲ್ಲರೂ ಅವರವರಿಗೆ ಬೇಕಾದ ಗಿಡಗಳನ್ನು ಆಯ್ಕೆ ಮಾಡಿ ಪಾಟಿನಲ್ಲಿ ಸಸಿಮಾಡುತ್ತಿದ್ದೆವು.

(ನಾನು ಬೇವು, ಚಕ್ಕೋತ, ನಿಂಬೆ ಗಿಡಗಳನ್ನು ಸಸಿ ಮಾಡಿರುವೆ).

ನಮ್ಮ ಮನೆಯ ಗೃಹಪ್ರವೇಶ ಸರಿಸುಮಾರು ಯುಗಾದಿಯ ಸಮಯಕ್ಕೆ ಅಂತ ಅಂದಾಜಿಸಿದ್ದ ಕಾರಣ, ನಮ್ಮ ತಂದೆಯವರಲ್ಲಿ ಒಂದು ಆಸೆ ಚಿಗುರೊಡೆದಿತ್ತು. ಅದೇನೆಂದರೆ, ಕಬ್ಬಿನ ಸಸಿ ಮಾಡುವುದು. ಆ ಸಸಿಯನ್ನು ಯುಗಾದಿಯ ಸಮಯಕ್ಕೆ ಭೂಮಿಯಲ್ಲಿ ನೆಡಬೇಕು ಅಂತ. ಅದರಂತೆಯೇ ಪಾಟಿನಲ್ಲಿಟ್ಟು ಜೋಪಾನ ಮಾಡಿ ಎರಡು ಸಸಿ ಮಾಡಿದ್ದರು.

ಕಳೆದ ವಾರ ನಾನು, ನಮ್ಮಾಕೆ ಜೊತೆಗೂಡಿ ಆ ಕಬ್ಬಿನ ಸಸಿಗಳಿಗೊಂದು ಪಾತಿ ಮಾಡಿ, ನಡುವಿನಲ್ಲಿ ಕುರಿಗೊಬ್ಬರವನ್ನು ಸೇರಿಸುತ್ತಾ, ಭೂಮಿಯಲ್ಲಿ ನೆಟ್ಟೆವು. ಆ ಕಬ್ಬಿನ ಸಸಿಗಳಿಗೆ ನಾನಿಟ್ಟ ಹೆಸರೇ, ಕರ್ವಿಲ್ just like ಕಪಿಲ್ 😉

ಕರ್ವು – ಕಬ್ಬು – Sugarcane.

Advertisements
This entry was posted in Uncategorized. Bookmark the permalink.

ಜೇನುಗೂಡಿನ ಮೊದಲ ಗಿಡ ಗೆ ಒಂದು ಪ್ರತಿಕ್ರಿಯೆ

  1. ಕಬ್ಬಿನ ಬಿಲ್ಲು ಕರ್ವಿಲ್ಲೂ ಆಗುವುದು 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s