ಕಬ್ಬಿಗರ ಕಾವದ ಮೊದಲ ಪದ್ಯ

ಸಂಪದದಲ್ಲಿ ನಾನು ಸುಮಾರು ನಾಲ್ಕು ವರ್ಷದ ಹಿಂದೆ ಬರೆದ ಬ್ಲಾಗ್.

ನೆನ್ನೆಯ ದಿನ ರಾತ್ರಿ ೭:೦೦ ಗಂಟೆಗೆ ಪ್ರಾರಂಭಿಸಿ ಕ್ರೈಂ ಡೈರಿಯ ಚೋಟಾ ರಾಜನ್ ಪುರಾಣ ಬರುವವರೆಗೆ, ಕಬ್ಬಿಗರ ಕಾವದ ಮೊದಲ ಪದ್ಯವನ್ನು ಅದೆಷ್ಟು ಬಾರಿ ಓದಿದ್ದೇನೋ ತಿಳಿಯದು. ತುಂಬಾ ಅಂದರೆ ತುಂಬಾ ಇಷ್ಟವಾಯಿತು ಈ ಪದ್ಯದ ಆಶಯ. ನೆನ್ನೆ ನಾನು ಬರೆದಿಟ್ಟುಕೊಂಡು ಅನ್ವಯಾರ್ಥ ಮತ್ತು ಪೂರ್ಣ ವಿವರಗಳನ್ನು ಹಾಕುತ್ತಿದ್ದೇನೆ. ಓದಿ, ಆನಂದಿಸಿ.

ಆವನ ಗಾಡಿ ನೋಡಿದವರಂ ಸಲೆ ಸೋಲಿಸುತಿರ್ಪುದುರ್ಕಿನಿಂ |
ದಾವನ ಪೂವಿನಂಬದಟರಂ ತಲೆವಾಗಿಸುತಿರ್ಪುದೇೞ್ಗೆಯಿಂ ||
ದಾವನ ಪಜ್ಜಳಿಪ್ಪ ಜಸಮೆಣ್ದೆಸೆಯೊಳ್ ನೆಲಸಿರ್ಪುದಾತನೀ |
ಗಾವಗಮೆನ್ನ ಜಾಣ್ಣುಡಿಗೆ ಮೆಯ್ಸಿರಿಯಂ ನನೆವಿಲ್ಲಬಲ್ಲಹಂ || ೧ ||

ಅನ್ವಯಾರ್ಥ

ಆವನ ಸಲೆ ಗಾಡಿ ನೋಡಿದವರಂ ಸೋಲಿಸುತಿರ್ಪುದು, ಆವನ ಪೂವಿನ ಅಂಬು ಅದಟರಂ ಉರ್ಕಿನಿಂದ ತಲೆಬಾಗಿಸುತಿರ್ಪುದು, ಆವನ ಏೞ್ಗೆಯಿಂದ ಎಣ್ದೆಸೆಯೊಳ್ ಪಜ್ಜಳಿಪ್ಪ ಜಸಂ ನೆಲೆಸಿರ್ಪುದು, ಆತನು ನನೆವಿಲ್ಲಬಲ್ಲಹಂ, ಎನ್ನ ಜಾಣ್ಣುಡಿಗೆ ಆವಗಂ ಮೆಯ್ಸಿರಿಯಂ ಈಗೆ.

ಸಲೆ – ಅತಿಶಯವಾಗಿ, ಚೆನ್ನಾಗಿ, ಸರಿಯಾಗಿ; ಗಾಡಿ – ಸೌಂದರ್ಯ, ಮೋಹ, ಗಾಂಭೀರ್ಯ; ಪೂವಿನ – ಹೂವಿನ; ಅಂಬು – ಬಾಣ; ಅದಟರಂ – ಪರಾಕ್ರಮಿಗಳನ್ನು, ಶೂರರನ್ನು; ಉರ್ಕು – ಶೌರ್ಯ, ಉಕ್ಕು, ಹೆಮ್ಮೆ, ಸೊಕ್ಕಿಗೆ ಬರು, ಹೆಚ್ಚಾಗು, ದಿಟ್ಟತನ; ಏೞ್ಗೆ – ಏಳಿಗೆ; ಎಣ್ದೆಸೆಯೊಳ್ – ಎಣ್(ಎಂಟು) ದೆಸೆಯೊಳ್ – ಎಂಟು ದಿಕ್ಕುಗಳಲ್ಲಿ; ಪಜ್ಜಳಿಪ್ಪ – ಪ್ರಜ್ವಲಿಸುತ್ತಿರುವ; ಜಸಂ – ಯಶಸ್ಸು; ನನೆ – ಮೊಗ್ಗು; ನನೆವಿಲ್ಲ – ನನೆ + ಬಿಲ್ಲ = ನನೆಯಂಬ = ನನೆಗಣೆಯ, ನನೆ + ಕಣೆ(ಬಾಣ) – ಮೊಗ್ಗಿನ ಬಾಣಗಳು; ಬಲ್ಲಹಂ – ತಿಳಿದವನು; ನನೆವಿಲ್ಲಬಲ್ಲಹಂ – ಮೊಗ್ಗಿನ ಬಾಣಗಳನ್ನು ಪ್ರಯೋಗಿಸುವುದನ್ನು ತಿಳಿದವನು, ಮನ್ಮಥ; ಜಾಣ್ಣುಡಿಗೆ – ಕವಿಯ ಭಾಷೆಯಾದ ಕನ್ನಡಕ್ಕೆ; ಆವಗಂ – ಯಾವಾಗಲೂ, ಹೆಚ್ಚು ಮುಂದೆ ಮುಂದೆ, ಅಧಿಕ; ಮೆಯ್ಸಿರಿ – ಶ್ರೀಮಂತಿಕೆ, ಶೋಭೆ; ಈಗೆ – ನೀಡಲಿ, ಕೊಡಲಿ, ಕರುಣಿಸಲಿ;

ಯಾರ ಅತಿಶಯವಾದ ಸೌಂದರ್ಯವು ನೋಡಿದವರನ್ನು ಮೋಹಪರವಶರನ್ನಾಗಿಸುತ್ತಿರುವುದೋ, ಯಾರ ಹೂವಿನ ಬಾಣವು ವೀರರನ್ನು ಹೆಮ್ಮೆಯಿಂದಲೇ ತಲೆಬಾಗುವಂತೆ ಮಾಡುತಿಹುದೋ, ಯಾರ ಏಳಿಗೆಯಿಂದ ಎಂಟು ದೆಸೆಯಲ್ಲಿಯೂ ಪ್ರಜ್ವಲಿಸುತ್ತಿರುವ ಯಶಸ್ಸು ನೆಲೆಸಿರುವುದೋ, ಆತನು ಮನ್ಮಥನು. ಅವನು, ನನ್ನ ಜಾಣ್ಣುಡಿಗೆ ಅಂದರೆ ಕನ್ನಡ ನುಡಿಗೆ ಯಾವಾಗಲೂ ಹೆಚ್ಚು ಹೆಚ್ಚು ಸಂಪತ್ತನ್ನು ಕರುಣಿಸುತ್ತಿರಲಿ.

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s