ಹೆಜ್ಜೆಯೊಡನೆ ಹೆಜ್ಜೆಗಳು ಕಲೆತಾಗ

ಪೃಥ್ವಿ ಚಿತ್ರದಲ್ಲಿ ಒಂದು ಸುಮಧುರವಾದ ಟ್ಯೂನಿರುವ ಹಾಡು ಇದೆ. ಹೆಜ್ಜೆಗೊಂದು ಹೆಜ್ಜೆ, ಜೋಡಿ ಜೋಡಿಗೂಡಿ ಸಾಗೋಸಂಜೆ ಮಧುರ ಸುಮಧುರ. ಬನ್ನಿ ಆ ಹಾಡಿನ ಸವಿಯನ್ನು ಸವಿಯುತ್ತಾ ಮುಂದೆ ಸಾಗೋಣ.

ಜನವರಿ ೨೨ ರಂದು ಸಂಚಯ ತಂಡದ ಹೆಜ್ಜೆ ಕಾರ್ಯಕ್ರಮವಿತ್ತು. ಕನ್ನಡಕ್ಕೆ ನಂಟಾದ ಅಪ್ಲಿಕೇಶನ್ನುಗಳು ಡೆವೆಲಪ್ ಮಾಡಿರುವ ಅನೇಕ ಜನರ ಒಡನಾಟ ಸಿಕ್ಕಿತ್ತು. ಹಿರಿಯರಾದ ನಾಗೇಶ ಹೆಗಡೆಯವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಂದದ್ದು ಕುತೂಹಲಕಾರಿಯಾಗಿತ್ತು. ಹಾಗೆಯೇ, ವಸುಧೇಂದ್ರ ಮತ್ತು ಬೇಳೂರು ಸುದರ್ಶನ ಅವರ ಮಾತುಗಳನ್ನು ಕೇಳುವ ಮತ್ತು ಅವರುಗಳ ಜೊತೆ ಮಾತನಾಡುವ ಅವಕಾಶ ಒದಗಿಬಂದಿತ್ತು.

ಕಾರ್ಯಕ್ರಮಕ್ಕೆ ಬರುವವರಿಗೆ ಅಂತ ನಾನು ಮನೆಯಿಂದ ಎಳ್ಳು-ಬೆಲ್ಲ ತೆಗೆದುಕೊಂಡು ಹೋಗಿದ್ದೆ. ಬಂದವರಿಗೆಲ್ಲರಿಗೂ ಅದನ್ನು ನೀಡಬೇಕೆನ್ನುವುದು ನನ್ನ ಆಸೆಯಾಗಿತ್ತು. ಆದರೆ ಎಷ್ಟು ಜನರಿಗೆ ಸಿಕ್ಕಿತೋ ಏನೋ ಗೊತ್ತಿಲ್ಲ.

ನಿಜಕ್ಕೂ ಹೇಳ್ಬೇಕಂದ್ರೆ ಅಲ್ಲಿದ್ದ ಜನರನ್ನು ನೋಡಿ, ನನಗೆ ಮುಜುಗರ ಆಗ್ತಿತ್ತು. ಏಕಂದ್ರೆ ಅವರುಗಳು ಮಾಡಿರುವ ಕೆಲಸಗಳ ಮುಂದೆ ನಾನು ಏನೂ ಮಾಡಿಯೇ ಇಲ್ಲ ಅನಿಸುತ್ತಿತ್ತು. ಆದರೂ ಗೆಳೆಯ ಓಂಶಿವು, ನೀನು ಮಾಡಿರುವ iPhone apps ಬಗ್ಗೆ ಹೇಳ್ಬೇಕು ಅಂತ ಬಲವಂತ ಮಾಡ್ತಾ ಇದ್ದ. ನಾನು ಮಾಡಿದ್ದ, i-Sudha Application ಬಗ್ಗೆ ಸ್ವಲ್ಪ ಮಾತನಾಡಿದೆ. ಇಲ್ಲಿಯವರೆಗೆ ಸುಮಾರು 2500 ಜನ ಇದನ್ನು ಡೌನ್ಲೋಡ್ ಮಾಡಿಕೊಂಡು ಸುಧಾ ಓದುತ್ತಿದ್ದಾರೆ. ಸುಧಾಗಾಗಿಯೇ ಬರೆದಿದ್ದ ಫೈರ್ಫಾಕ್ಸ್ ಆಡ್-ಆನ್ ಬಗ್ಗೆ ಹೇಳಿದೆ.

ನಿಜಕ್ಕೂ ಆಶ್ಚರ್ಯವೆನಿಸಿದ್ದು, ಶ್ರೀಧರ್ ಎನ್ನುವ ಹುಡುಗ, ಕಣ್ಣುಗಳು ಕಾಣದಿದ್ದರೂ ಕೂಡ ಕಣ್ಣಿಲ್ಲದವರಿಗೆ ನೆರವಾಗಬಲ್ಲ ಸಾಫ್ಟವೇರ್ ಮೇಲೆ ಕೆಲಸ ಮಾಡುತ್ತಿರುವ ವಿಷಯ ಕೇಳಿ ವಿಸ್ಮಯವಾಯ್ತು. ಹಾಗೆ, ಅರವಿಂದ Latexನಲ್ಲಿ ಮಾಡಿದ್ದ ಸುಂದರ ಪ್ರೆಸೆಂಟೇಶನ್ ಓಡುತ್ತಿರುವಾಗ ಗುಬ್ಬಿ ಮತ್ತು ನವಿಲು ಫಾಂಟುಗಳ ಪ್ರಸ್ತಾಪವಾಯ್ತು. ಈಗ ನಾನು ನನ್ನ ಸಿಸ್ಟಮ್ಮಿನಲ್ಲಿ ಕೇದಗೆ ಮತ್ತು ಮಲ್ಲಿಗೆ ತೆಗೆದುಬಿಟ್ಟು, ಗುಬ್ಬಿ ಮತ್ತು ನವಿಲುಗಳನ್ನು ಹಾಕಿಕೊಂಡಿದ್ದೇನೆ.

ಹಾಗೆಯೇ, ವಾಸುದೇವ ಕಾಮತ್ ಕನ್ನಡ ಡಿಕ್ಷನರಿ ಬಗ್ಗೆ, ವಿವೇಕ ಶಂಕರ ಕನ್ನಡ ವಿಕ್ಷನರಿಯ ಬಗ್ಗೆ,  ಶಂಕರ್ ಪ್ರಸಾದ್ ಲೋಕಲೈಸೇಶನ್ ಬಗ್ಗೆ, ಮುರಳಿ ಸೈಕಲ್ ಬಗ್ಗೆ, ಶ್ರೀಧರ್ ಕನ್ನಡ ಕೀಬೋರ್ಡ್ ಬಗ್ಗೆ, ಶಶಿಶೇಖರ್ ಅವರು ಉದ್ಯಮದ ಬಗ್ಗೆ, indicross.comನ ರುದ್ರೇಶ ಶೆಟ್ಟಿಯವರು, ಸವಿತಾ ಅವರು ಮಹಿಳೆಯರು ಯಾಕೆ ಟೆಕ್ನಾಲಜಿ ಕ್ಷೇತ್ರದಲ್ಲಿ ಹಿಂದೆ ಎಂಬುದರ ಕಾರಣ ಹುಡುಕುವ ಬಗ್ಗೆ ;-), http://www.freeganita.com/ ದ ಸೋಮಯಾಜಿಗಳು, Kannada Scrabble ಮಾಡಿದ್ದ ಪರಮಶಿವಪ್ಪನವರು, ಹೀಗೆ ಅನೇಕ ಜನರ ಒಡನಾಟ ಸಿಕ್ಕಿತ್ತು.

But, ನೀವು ಏನೇ ಹೇಳಿ, ಕಾರ್ಯಕ್ರಮದ ಮುಖ್ಯ ಹೈಲೈಟ್ ಎಂದರೆ,

“ಊಟ”

ಆ ದಿನ ಏರ್ಪಾಟಾಗಿದ್ದ ಊಟ ನಿಜಕ್ಕೂ ಬೊಂಬಾಟಾಗಿತ್ತು.

Advertisements
This entry was posted in Uncategorized. Bookmark the permalink.

2 Responses to ಹೆಜ್ಜೆಯೊಡನೆ ಹೆಜ್ಜೆಗಳು ಕಲೆತಾಗ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s