ಈಗೀಗ, ಹಕ್ಕಿಗಳ ಕಲರವ ನಿದ್ದೆಯಿಂದ ಎಬ್ಬಿಸುತ್ತಿಲ್ಲ, ಹಾಗಂತ ರಾತ್ರಿಯ ಮೌನಗಳು ನಿದ್ದೆಗೇನು ಅಡ್ಡಿಮಾಡುತ್ತಿಲ್ಲ. “ಜೀವನವೇ ಸುಖಪಯಣ ಚೆಲುವಿನ ಕವನ” ಅಂತ ಹಾಡ್ತೀನಿ. ಗುನುಗ್ತೀನಿ. ಕೆಲವೊಮ್ಮೆ ಅಯ್ಯೋ ಹೋದ ವಾರ ಎಷ್ಟೊಂದು ಟೈಂ ವೇಸ್ಟ್ ಮಾಡ್ದೆ ಅನ್ಸತ್ತೆ. ಏನೇನೋ ಕಲ್ತಕೋಬೇಕು ಅಂತ ಅನ್ಸತ್ತೆ. ಅಯ್ಯೋ ಆಗ್ತಾ ಇಲ್ವಲ್ಲ ಅಂತ ಕೊರಗ್ತೀನಿ. ಸಂಜೆಗಳು ಬೋರ್ ಅನ್ಸತ್ತೆ. ತುಂಬಾ ನಿದ್ದೆ ಮಾಡ್ತಾ ಇದ್ದೀನಿ.

ಯಾವುದೋ ಹುಡುಕಾಟದಲ್ಲಿದ್ದೇನೆ ಅನ್ಸತ್ತೆ. ನಾನು ಹುಡುಕುತ್ತಿರುವ ವಸ್ತು ನನ್ನನ್ನು ನೋಡಿ ನಗುತ್ತಿದೆಯೇನೋ ಅಂತ ಅನಿಸುತ್ತೆ. ನಾನೂ ನಗ್ತೀನಿ. ಸಡನ್ನಾಗಿ ಸ್ಕೂಲ್ ನೆನಪಾಗತ್ತೆ. ಬಾಲ್ಯದ ಗೆಳೆಯರು ನೆನಪಾಗ್ತಾರೆ. ತಾತ ಹೇಳಿದ ಶಾಂತಲಾ ಕತೆ ನೆನಪಾಗತ್ತೆ. ದಿನಕ್ಕೊಂದು ಮಕ್ಕಳ ಕತೆ ಓದ್ತೀನಿ. ಕಿತ್ತಳೆ ರಾಜಕುಮಾರಿಯ ಕತೆ ನೆನಪಾಗತ್ತೆ.

ನಾನು ಮತ್ತು ಹೆಂಡತಿ ಸೇರಿ ಬಿಡಿಸಿದ ಜೇನುಗೂಡಿನ ಚಿತ್ರ ಕಣ್ಣ ಮುಂದೆ ಬರತ್ತೆ. ಹೊಡೆದಾಟ ಬಡಿದಾಟಗಳ ಬಗ್ಗೆ ತೀರಾ ಅಸಡ್ಡೆಯಾಗುತ್ತಿದೆ.

Whats your name ? ಅಂತ ಸುಮಾರು ೨೦ ಬಾರಿ ಕೇಳಿದ್ದ ನನ್ನ ಮೇಷ್ಟ್ರು ನೆನಪಾಗ್ತಾರೆ.

Advertisements