ಕೈದೋಟದಿಂದ ತಿಳಿದುಕೊಂಡದ್ದು

೧. ಗಿಡಗಳನ್ನು ನೆಡಲು, ಅವುಗಳ ಪೋಷಣೆ ಮಾಡಲು ತುಂಬಾ ತಾಳ್ಮೆ ಬೇಕು.

೨. ಮೆಣಸಿನಕಾಯಿ ಗಿಡಕ್ಕೆ ಬರುವಷ್ಟು ಹುಳದ ಕಾಟ ಬೇರೆ ಯಾವ ಗಿಡಕ್ಕೂ ಬಾರದು.

೩. ನಂದಿಬಟ್ಟಲು ಗಿಡಕ್ಕೆ ಒಂದು ರೀತಿ ವಿಶೇಷ ಕೀಟ ಬರುತ್ತೆ (ಡ್ರಾಗನ್ ಮಾಥ್) ಇರಬೇಕು. ಅದು ಬಂದರೆ, ಗಿಡದ ಎಲ್ಲ ಎಲೆಗಳೂ ಮಾಯವಾಗುತ್ತದೆ.

೪. ಶ್ಯಾಮಂತಿಗೆ ಗಿಡದಲ್ಲಿ ಮೊಗ್ಗುಗಳು ಬೇಗ ಬಂದುಬಿಡುತ್ತವೆ. ಆದರೆ ಅವು ಹೂವಾಗಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ.

೫. ಕರಣಕುಂಡಲ ಗಿಡ ಒಮ್ಮೆ ನೆಟ್ಟರೆ, ಅದು ಹೂವು ಬಿಟ್ಟು, ಬೀಜಗಳು ಸಿಡಿದು ತುಂಬಾ ಹರಡುತ್ತವೆ. ಸಸಿಗಳು ಎಲ್ಲೆಲ್ಲೂ ಬೆಳೆದಿರುತ್ತವೆ. ಅವುಗಳನ್ನು ಸರಿಯಾಗಿ ಕ್ರಮದಲ್ಲಿ ನೆಟ್ಟರೆ ನೋಡಲು ಅಂದವಾಗಿರುತ್ತದೆ.

೬. ಗಿಡಗಳನ್ನು ಕುರಿಗಳಿಂದ ಕಾಪಾಡುವುದು ತುಂಬಾನೇ ಕಷ್ಟದ ಕೆಲಸ. ಈ ಕುರಿಗಳಿಗೆ ಬೇವಿನ ಗಿಡವು ಅತ್ಯಂತ ಪ್ರಿಯ.

೭. ಆಡು ಮುಟ್ಟದ ಸೊಪ್ಪೆಂದರೆ, ಕಣಗಲೆ ಮತ್ತು ಹೊಂಗೆ.

೮. ಜಾಜಿಗಿಡ ಸ್ವಲ್ಪ ದೊಡ್ಡದಾದ ಮೇಲೆ ಮನೆಯೆಲ್ಲ ಸುವಾಸನೆ ಬೀರುತ್ತದೆ.

೯. ಪಾರಿಜಾತ ಹೂವುಗಳು ಬೇಕೆಂದರೆ, ಬೆಳಗ್ಗೆ ಬೇಗನೇ ಎದ್ದು ಆರಿಸಿಕೊಳ್ಳಬೇಕು. ಇಲ್ಲವಾದರೆ ಎಲ್ಲವೂ ಉದುರಿ ಹೋಗುವುದು. ಅಷ್ಟೇ ಅಲ್ಲ, ತುಂಬಾ ಬೇಗ ಒಣಗಿಹೋಗುವುದು.

೧೦. ಲೋಳೆಸರ, ವರ್ಷಕ್ಕೂ ಏನೋ ಒಮ್ಮೆ, ಒಂದು ರೀತಿಯ ವಿಶೇಷವಾದ ಹೂವನ್ನು ಬಿಡುತ್ತದೆ.

೧೧. ಕೆಲವು ಅಲಂಕಾರಿಕ ಗಿಡಗಳನ್ನು ಬಿಸಿಲಿನಲ್ಲಿ ಇಡಬಾರದು.

೧೨. ಸ್ಪಟಿಕ ಗಿಡವೂ ಕೂಡ ಕರಣಕುಂಡಲದಂತೆ ಸಿಕ್ಕಾಪಟ್ಟೆ ಬೀಜ ಸಿಡಿಯುವುದು.

೧೩. ತುಂಬೆ ಗಿಡ ತುಂಬಾ ಸೂಕ್ಷ್ಮ.

೧೪. ಕೈದೋಟದಲ್ಲಿ ಹುಳಗಳು ಹೆಚ್ಚಾದರೆ, ಹಕ್ಕಿಗಳ ಚಿಲಿಪಿಲಿಯೂ ಹೆಚ್ಚಾಗುತ್ತದೆ.

೧೫. ಒಂದು ವೇಳೆ, ನೆಲದಲ್ಲಿ ಹಾಕಿರುವ ಗಿಡಗಳಿಗೆ ಮೂರು ದಿನ ನೀರು ಹಾಕದಿದ್ದರೂ ಪರವಾಗಿಲ್ಲ, ಆದರೆ ಪಾಟುಗಳಲ್ಲಿರುವ ಗಿಡಗಳಿಗೆ ಪ್ರತಿದಿನವೂ ನೀರು ಹಾಕಲೇಬೇಕು.

೧೬. ವೀಳ್ಯದ ಎಲೆ ಗಿಡ ಹೇಗೆ ಬೆಳೆಸಬೇಕು ಎಂಬುದು ತಿಳಿಯುತ್ತಲೇ ಇಲ್ಲ.

೧೭. ಎಕ್ಕದ ಗಿಡದಲ್ಲಿಯೂ ಕಾಯಿ ಬಿಡುತ್ತದೆ. 

೧೮. ಕ್ಯಾರೆಟ್ ಬೀಜಗಳನ್ನು ಹಾಕಿದರೆ, ಅವುಗಳ ನಡುವೆ ಸರಿಯಾದ ಅಂತರವಿರಬೇಕು.

೧೯. ಯಾವುದಾದರು ಹೂವಿನ ಸಸಿಯನ್ನೋ, ಅಥವಾ ಗೆಡ್ಡೆಯನ್ನೋ ನೆಟ್ಟರೆ, ಮಣ್ಣಿನಲ್ಲಿ ಸಸಿಯ ಸುತ್ತ, ಅಥವಾ ಗೆಡ್ಡೆಯ ಸುತ್ತ ತೆಂಗಿನ ನಾರನ್ನು ಹಾಕಬೇಕು.

೨೦. ಕರಿಬೇವಿನ ಗಿಡಕ್ಕೆ ಬೇರುಗಳಿಗೆ ಹುಳಿ ಮೊಸರನ್ನು ಹಾಕಿದರೆ ಒಳ್ಳೆಯದಂತೆ.

 

ಕೊ.ಕೊ – ಇವೆಲ್ಲವೂ ಸರಿ ಅಂತ ಯಾವುದೇ ಕಟ್ನಿಟ್ ಇಲ್ಲ. ಆದರೂ, ಸುಮ್ಮನೆ ಹಾಗೆ ಅವರಿವರಿಂದ ಕೇಳಿದ್ದು ಹಾಗು ಬರಿಗಣ್ಣಿಗೆ ಗೋಚರಿಸಿದ್ದು.

Advertisements
This entry was posted in Uncategorized. Bookmark the permalink.

ಕೈದೋಟದಿಂದ ತಿಳಿದುಕೊಂಡದ್ದು ಗೆ 2 ಪ್ರತಿಕ್ರಿಯೆಗಳು

 1. Lo ಹೇಳುತ್ತಾರೆ:

  “ಮೆಣಸಿನಕಾಯಿ ಗಿಡಕ್ಕೆ ಬರುವಷ್ಟು ಹುಳದ ಕಾಟ ಬೇರೆ ಯಾವ ಗಿಡಕ್ಕೂ ಬಾರದು.”
  ಇದಕ್ಕೆ ಪ್ರಕೃತಿಯೇ ಒಂದು ಮದ್ದನ್ನು ನೀಡಿದೆ. “ಚಂಡಿಹೂವಿನ ಗಿಡ”ಗಳನ್ನು ನೆಡಬೇಕು.

  “ಕರಿಬೇವಿನ ಗಿಡಕ್ಕೆ ಬೇರುಗಳಿಗೆ ಹುಳಿ ಮೊಸರನ್ನು ಹಾಕಿದರೆ ಒಳ್ಳೆಯದಂತೆ.”
  ಟೀ ಪುಡಿಯನ್ನೂ ನಾವು ಹಾಕುತ್ತಿದ್ದೆವು. ಬಳಸಿದ ಟೀ ಪುಡಿರೀ. 🙂

  “ಯಾವುದಾದರು ಹೂವಿನ ಸಸಿಯನ್ನೋ, ಅಥವಾ ಗೆಡ್ಡೆಯನ್ನೋ ನೆಟ್ಟರೆ, ಮಣ್ಣಿನಲ್ಲಿ ಸಸಿಯ ಸುತ್ತ, ಅಥವಾ ಗೆಡ್ಡೆಯ ಸುತ್ತ ತೆಂಗಿನ ನಾರನ್ನು ಹಾಕಬೇಕು.”
  ಎಂದೂ ಪ್ರಯತ್ನಿಸಿರಲಿಲ್ಲ. ಇದರಿಂದ ಲಾಭವೇನು?

 2. jinnu ಹೇಳುತ್ತಾರೆ:

  ತೆಂಗಿನ ನಾರಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿರುತ್ತದೆ. ಹಾಗೆಯೇ ಕಾಲಕ್ರಮೇಣ ಗೊಬ್ಬರವೂ ಆಗುತ್ತೆ ಎನ್ನಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s