ಮೊಬೈಲು ಫೋನುಗಳಲ್ಲಿ ಕನ್ನಡ ಟೈಪಿಂಗ್ – ಒಂದು ಅಪ್ಡೇಟ್

ಸ್ಮಾರ್ಟಫೋನುಗಳಲ್ಲಿ ಕನ್ನಡ ಟೈಪೋದಕ್ಕೆ ಈಗಾಗಲೇ ಅನೇಕ ಕಸರತ್ತುಗಳನ್ನು ನಡೆಸಿ ಒಂದು ಉತ್ತರವನ್ನು ಕಂಡುಕೊಂಡಿರುತ್ತೇವೆ. ಅದರ ಮುಂದುವರೆದ ಭಾಗವಾಗಿ ಈ ಬ್ಲಾಗು.

1. ಆಂಡ್ರಾಯ್ಡ್ ಫೋನುಗಳು

ನಿಮ್ಮ ಸ್ಮಾರ್ಟಫೋನು ಆಂಡ್ರಾಯ್ಡ್ ೫.೦, ಲಾಲಿಪೋಪ್ ಆವೃತ್ತಿಯನ್ನು ಬೆಂಬಲಿಸುತ್ತದೆಯೇ ಪರಿಶೀಲಿಸಿ. ಆಂಡ್ರಾಯ್ಡ್ ೫.೦ರಲ್ಲಿ ಗೂಗಲಿScreenshot_2015-05-21-14-08-21ನವರು ಕನ್ನಡ ಕೀಬೋರ್ಡನ್ನು ನೀಡಿದ್ದಾರೆ.

ಪ್ರಯೋಜನಗಳು

1. ಇದು ಈಗಾಗಲೇ ಎಲ್ಲ ಆಪರೇಟಿಂಗ್ ಸಿಸ್ಟಮ್ಮುಗಳಲ್ಲಿ ಅಳವಡಿಯಾಗಿರುವ INSCRIPT ಲೇಔಟನ್ನು ಫಾಲೋ ಮಾಡುತ್ತದೆ. ಆದ್ದರಿಂದ ಕಡಿಮೆ ಅವಧಿಯಲ್ಲಿ ಕಡಿಮೆ ಕೀ ಬಳಸಿ ವಾಕ್ಯ ರಚನೆ ಮಾಡಬಹುದು.

2. ಇದು ಇಡೀ ಫೋನಿನಲ್ಲಿ ಲಭ್ಯ, ಹಾಗಾಗಿ ನೀವು ಮೊದಲು ಕಾಪಿ ಮಾಡಿ, ನಂತರ ಮೇಯ್ಲಿನಲ್ಲಿಯೋ, ವಾಟ್ಸಾಪಿನಲ್ಲಿಯೋ ಪೇಸ್ಟ್ ಮಾಡಬೇಕಾದ ಪ್ರಮೇಯವಿಲ್ಲ.

3. ನೀವು ಕನ್ನಡವನ್ನು ಕನ್ನಡದ ಮೂಲಕವೇ ಟೈಪಬಹುದು. ಇಂಗ್ಲೀಶಿನಿಂದ ಟ್ರಾನ್ಸಲಿಟರೇಟ್ ಮಾಡಬೇಕಾದ ಅವಶ್ಯಕತೆಯಿಲ್ಲ. ಉದಾ: ರಕ್ತ ಟೈಪಲು, rakta ಎಂದು ಟೈಪುವ ಬದಲು ಕನ್ನಡದ ‘ರಕ್ತ’ ಪದವನ್ನು ನೇರವಾಗಿ ಟೈಪಬಹುದು.

ನ್ಯೂನತೆಗಳು

1. ಅನೇಕರು ತಮಗೆ INSCRIPTಗಿಂತ ಟ್ರಾನ್ಸಲಿಟರೇಟ್ ಆಧಾರಿತ ಕೀಬೋರ್ಡ್ ಸುಲಭ ಎನ್ನುತ್ತಾರೆ. ಇವರಿಗೆ ನನ್ನ ಕಿವಿಮಾತು. ಡೆಸ್ಕಟಾಪ್ ಆಪರೇಟಿಂಗ್ ಸಿಸ್ಟಮ್ಮಿನಲ್ಲಾದರೆ, ಹಾರ್ಡವೇರ್ ಕೀಬೋರ್ಡ್ ಇರುತ್ತದೆ. ಅಲ್ಲಿ inscript ಬಳಸುವುದು ಕಷ್ಟವಿರಬಹುದು. ಆದರೆ ಮೊಬೈಲುಗಳಲ್ಲಿ, ಆನ್-ಸ್ಕ್ರೀನ್ ಕೀಬೋರ್ಡ್ ಇರುವುದರಿಂದ, ಇದುವೇ ಸುಲಭ. ಒಮ್ಮೆ ಪ್ರಯತ್ನಿಸಿ.

2. ಇದರಲ್ಲಿ, ವ್ಯಂಜನದೊಡನೆ, ‘ಒ’ ಸ್ವರ ಒತ್ತುವುದು ಕಷ್ಟ. ಉದಾಹರಣೆಗೆ. ‘ಮೊದಲು’ ಟೈಪಬೇಕಿದ್ದರೆ, ಮೊದಲು ‘ಮ’ಕ್ಕೆ ಏತ್ವ ಕೊಟ್ಟು ನಂತರ ಕೊಂಬಿನ ದೀರ್ಘ ಕೊಡಬೇಕು.

೨. ಐಫೋನುಗಳಲ್ಲಿ

ನೀವು ಐಓಸ್ ೮.೦ ನಂತರ ಆವೃತ್ತಿಯನ್ನು ಬಳಸುತ್ತಿರುವವರಾದರೆ, ನಿಮಗೊಂದು ಸಂತಸದ ಸುದ್ದಿ. ಐಓಸ್ಸಿಗೆ ನಾನೇ ತಯಾರಿಸಿದ ಒಂದು ಆಪ್ ಇದೆ. ಆದರೆ ಅದಕ್ಕಿಂತ ಮುಂದುವರೆದ ಎರಡು ಆಪುಗಳೆಂದರೆ.

೧. sangam ಎನ್ನುವ ಆಪ್ ಒಂದಿದೆ.

https://itunes.apple.com/us/app/sangam-keyboards/id910182628?mt=8

ಇದಲ್ಲದೆ, ೨. iKanType ಎನ್ನುವ ಆಪ್ ಒಂದಿದೆ. ಅದನ್ನೂ ಬಳಸಿ ನೋಡಿ(ಇದರ ಕೊಂಡಿಯನ್ನು ಯಾಕೆ ಲಗತ್ತಿಸಲು ಸಾಧ್ಯವಾಗುತ್ತಿಲ್ಲ) . ಇತ್ತೀಚಿನ ಮಾಹಿತಿ ಪ್ರಕಾರ ಇದು ಐಸ್ಟೋರಿನಲ್ಲಿ ಸದ್ಯಕ್ಕೆ ಲಭ್ಯವಿಲ್ಲ.

 

ವಿಂಡೋಸ್ ಫೋನುಗಳಲ್ಲಿ

ಸದ್ಯಕ್ಕೆ ನಿಮ್ಮನ್ನು ದೇವರೇ ಕಾಪಾಡಬೇಕು. ವಿಂಡೋಸ್ ಮೊಬೈಲುಗಳಲ್ಲಿ ನೇಟೀವ್ ಕೀಬೋರ್ಡ್ ಇನ್ನೂ ಲಭ್ಯವಿಲ್ಲ. ಇದರ ಬಗ್ಗೆ ಮೈಕ್ರೋಸಾಫ್ಟಿನ ಗಮನ ಸೆಳೆಯಲು ಈ ಲಿಂಕುಗಳಲ್ಲಿ ದನಿಗೂಡಿಸಿ.

https://windowsphone.uservoice.com/forums/101801-feature-suggestions/suggestions/5134519-add-kannada-keyboard-support

https://www.change.org/p/microsoft-kannada-keyboard-on-windows-phone-8

Advertisements
This entry was posted in Uncategorized. Bookmark the permalink.

ಮೊಬೈಲು ಫೋನುಗಳಲ್ಲಿ ಕನ್ನಡ ಟೈಪಿಂಗ್ – ಒಂದು ಅಪ್ಡೇಟ್ ಗೆ ಒಂದು ಪ್ರತಿಕ್ರಿಯೆ

  1. ವಿ.ರಾ.ಹೆ. ಹೇಳುತ್ತಾರೆ:

    ವಿಂಡೋಸ್ ಫೋನಲ್ಲಿ typekannada ಅನ್ನುವ app ಇದೆ. ಅದು ಆನ್ ಲೈನ್ ಮಾತ್ರ ಕೆಲಸ ಮಾಡುತ್ತದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s