ಆಡಂಬರ, ಸಡಗರ ಮತ್ತು ವಿಜೃಂಭಣೆ

ಮೊನ್ನೆ ಹೀಗೆ, ಇಂಗ್ಲೀಶಿನ “ಆಸ್ಟೆಂಟೇಶಿಯಸ್” ಅನ್ನೋ ಪದ ಕಿವಿಗೆ ಬಿತ್ತು. ಅಗತ್ಯಕ್ಕಿಂತ ಹೆಚ್ಚಿನ ಪ್ರಣಾದಲ್ಲಿ ಏನನ್ನಾದರು ವಿವರಿಸಬೇಕಾದರೆ, ಕನ್ನಡದಲ್ಲಿ ನಾವು ಏನು ಬಳಸ್ತೀವಿ ಅಂತ ಲೆಕ್ಕ ಹಾಕ್ತಾ ಇದ್ದೆ. ಕೆಲವೊಂದಷ್ಟು ಹೊಳೆದವು.

ಆಡಂಬರ – ಹೆಚ್ಚಿನ ಸಂದರ್ಭದಲ್ಲಿ, ಇದು ನಕಾರಾತ್ಮಕವಾಗಿರುತ್ತದೆ. “ಅನಗತ್ಯ ತೋರಿಕೆ” ಇರುತ್ತದೆ.

ಮಾದರಿಗೆ – ಅಬ್ಬಾಬ್ಬಾಬ್ಬಾ, ಮನೆ ತುಂಬ ಬರೀ ಆಡಂಬರ….

ಅವಳದ್ದಾ, ಬರೀ ಆಡಂಬರದ ಮಾತು, ಅಷ್ಟೇ..

ಹಾಗೆಯೇ, ಸಕಾರಾತ್ಮಕವಾಗಿ ಹೆಚ್ಚಿನ ವಿಶೇಷಣ ಅಂಟಿಸಬೇಕಾದರೆ ಏನು ಬಳಸ್ತೀವಿ ಅಂತ ಯೋಚಿಸಿದಾಗ, ಹೊಳೆದದ್ದು

ವಿಜೃಂಭಣೆ ಮತ್ತು ಸಡಗರ.

ಮೈಸೂರು ದಸರಾ ಮೆರವಣಿಗೆ ವಿಜೃಂಭಣೆಯಿಂದ ಸಾಗಿದೆ. ಜನರು ಅದರಲ್ಲಿ ಸಡಗರದಿಂದ ಪಾಲ್ಗೊಂಡರು.

 

ಕೆಲವೊಂದು ಸಂದರ್ಭಗಳಲ್ಲಿ, ಈ ವಿಶೇಷಣಗಳಿಗೆ ಅತ್ಯಂತ(ಅಥವಾ ಮತ್ತಷ್ಟು) ಪದಗಳನ್ನೂ  ಸೇರಿಸುತ್ತೇವೆ.

ಅತ್ಯಂತ ವಿಜೃಂಭಣೆ, ಮತ್ತಷ್ಟು ಸಡಗರ.

 

“ಓಯ್, ಸೂಪರ್(ಛಾಂಗು ಭಳಾ ಭಾಪುರೇ) ಕಣೋ” ಅಂತ ನನ್ನ ಮನಸ್ಸು ನನಗೇ ಹೇಳುತ್ತಾ, ನನಗೇ ಕಣ್ಣು ಹೊಡೆದಂಗಾಯಿತು.

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s