ಕಡಲೆಕಾಯಿ ಉಸಲಿ ಪುರಾಣ

ನಿಮಗೆಲ್ಲರಿಗೂ ಆಚೆಮನೆಯ ಸುಬ್ಬಮ್ಮ ನೆನಪಿರಬೇಕಲ್ಲ, ಅದೆ “ಏಕಾದಶೀ ಉಪವಾಸದ ದಿನ ಏನೂ ತಿನ್ನಲ್ವಲ್ಲ” ಅವರು. ಅವರು ಹೀಗೆ ನಮ್ಮ ಮನೆ ಕಡೆ ಬಂದಿದ್ರು. ಅವರನ್ನ ನೋಡಿ, ಏಕಾದಶಿ ಅಲ್ಲದಿದ್ದರೂ ಉಸಲಿ ತಿನ್ನುವ ಆಸೆ ಆಯ್ತು. ಸುಬ್ಬಮ್ಮನವರಿಗೆ ಹುರುಳಿಕಾಳಿನ ಉಸಲಿ ಇಷ್ಟವಾದರೆ ನನಗೆ ಕಡಲೆಕಾಳಿನ ಉಸಲಿ ಇಷ್ಟ.

ಸರಿ ನಮ್ಮ ಅಮ್ಮನಿಗೆ ಕರೆ ಮಾಡಿ, “ಕಡಲೆಕಾಯಿ ಉಸಲಿ” ಹೇಗೆ ಮಾಡೋದು ಅಂತ ಕೇಳಿದೆ. ಅವರು ಎರಡು ವಿಧಾನ ಹೇಳಿದ್ರು. ಅವರು ಹೇಳಿದ್ದರ ಎಷ್ಟನ್ನು ಪಾಲಿಸಿದೆನೋ ಗೊತ್ತಿಲ್ಲ, ಆದರೆ ಪ್ರಯತ್ನವನ್ನಂತು ಮಾಡಿದೆ. ನನ್ನ ಒಬ್ಬರು ಸ್ನೇಹಿತರೂ ಇದ್ದ ಕಾರಣ ಇಬ್ಬರೂ ಸೇರಿ ಮಾಡೋದು ಅಂತ ತೀರ್ಮಾನ ಆಯ್ತು.

ಸಂಜೆ ಅಂಗಡಿಗೆ ಹೋಗಿ ಕಂದು ಬಣ್ಣದ ಕಡಲೆಕಾಳನ್ನು ತಂದ್ವಿ. ಅದನ್ನು ತೊಳೆದು, ನೀರಿನಲ್ಲಿ ಮುಳುಗಿಸಿ ಇಟ್ಟಿ. ಬೆಳಗ್ಗೆ ಎದ್ದು ಕುಕ್ಕರಿನಲ್ಲಿ ಇಟ್ಟು ಒಂದು ಕೂಗು ಕೂಗವ ತನಕ ಕಾಯುತ್ತ ಕುಳಿತೆವು.

ಹಾಗೆಯೇ ಪಕ್ಕದಲ್ಲಿ, ಒಂದು ಮಿಕ್ಕಿಜಾರಿನಲ್ಲಿ “ತೆಂಗಿನಕಾಯಿ ತುರಿ, ಎರಡು ಹಸಿಮೆಣಸಿನ ಕಾಯಿ, ಇಂಗು, ಉಪ್ಪು” ಹಾಕಿ ಎಲ್ಲದರ ಸಾರವೂ ಒಟ್ಟುಗೂಡುವಂತೆ ಮಾಡಿಕೊಂಡಿದ್ದಾಯಿತು.

ಈಗ ಒಂದು ಬಾಣಲೆಯಲ್ಲಿ, ಎರಡು ಚಮಚ ಎಣ್ಣೆಗೆ ಸಾಸಿವೆ ಹಾಕಿ, ಅದು ಚಟಚಟ ಸಿಡಿದ ಮೇಲೆ, ಅದಕ್ಕೆ ಒಂದಷ್ಟು ಕರಿಬೇವಿನ ಸೊಪ್ಪನ್ನೂ ಹಾಕಿದೆ. ಆ ನಂತರ ಈ ಮೇಲೆ ಮಿಕ್ಸಿಗೆ ಹಾಕಿದ್ದ ಸಾಧನಗಳನ್ನು ಒಗ್ಗರಣೆ ಬಾಣಲೆಗೆ ಹಾಕಿ, ಬಾಡಿಸಿದೆವು. ಕೆಲವು ಕ್ಷಣಗಳ ನಂತರ ಇದಕ್ಕೆ ಸ್ವಲ್ಪ ಸ್ವಲ್ಪವೇ ಬೆಂದ ಕಡಲೆಕಾಳನ್ನು ಹಾಕುತ್ತಾ ಬಂದೆ. ಎಲ್ಲವೂ ಒಟ್ಟಾಗಿ ಒಂದು ರೀತಿಯ ಘಮ್ಮೆನ್ನುವ ವಾಸನೆ ಬರುವ ತನಕ ಕಾದೆ. ಇದಾದ ಮೇಲೆ, ನಿಂಬೆ ಹಣ್ಣಿನ್ನು ರಸವನ್ನು ಸೇರಿಸಿ, ಕೊತ್ತಂಬರಿ ಸೊಪ್ಪನ್ನು ಮೇಲೆ ಅಲಂಕಾರಕ್ಕೆ ಉದುರಿಸಿದೆ.

ನಮ್ಮಮ್ಮ ಮಾಡುವಷ್ಟು ಚೆನ್ನಾಗಿಲ್ಲದಿದ್ದರೂ, ನಾವೇ ಮಾಡಿದ್ದಾದ್ದರಿಂದ, ತಿನ್ನಲೇ ಬೇಕಾಯಿತು. “ಕೈ” ಏನೇನೂ ಪಳಗಿಲ್ಲ ಎನ್ನುವುದು ಪಕ್ಕಾ ಆಯ್ತು.

ಹಾಂ, ಪುರಾಣ ಇಲ್ಲಿಗೇ ಮುಗಿಯಲಿಲ್ಲ, ಈ ಕಾಳು ಬೇಯುವಾಗ ಇತ್ತಲ್ಲ ನೀರು, ಅದನ್ನ ತೆಗೆದಿಟ್ಟುಕೊಂಡಿದ್ವಿ. ಅದಕ್ಕೆ ಮತ್ತೆ ಒಣಮೆಣಸಿನ ಕಾಯಿಯ ಒಗ್ಗರಣೆ ಹಾಕಿ ಅದನ್ನೂ ಕುಡಿದ್ವಿ. “ಹೇಗಿತ್ತು” ಅಂತ ಮಾತ್ರ ಕೇಳಬೇಡಿ, ಪ್ಲೀಸ್ !!!

ಸುಬ್ಬಮ್ನೋರು ನಾವು ಮಾಡಿದ ಅಡುಗೆಯನ್ನು ಮೂಸಿಯೂ ಕೂಡ ನೋಡಿಲಿಲ್ಲ ಎಂದು ಬೇರೆ ಹೇಳಬೇಕಿಲ್ಲವಷ್ಟೇ !!!

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s