“ಈ ಪುರಂದರದಾಸರು ಹೆಚ್ಚೋ ಮತ್ತು ಕನಕದಾಸರು ಹೆಚ್ಚೋ” ಎಂಬ ಹುಚ್ಚು ಪ್ರಶ್ನೆ ಬಂದಾಗಲೆಲ್ಲ, ಏಕೆ ಸಮಾಜವಾದಿಗಳು ಈ ವಿಚಾರದತ್ತ ತಲೆಹಾಕಲಿಲ್ಲ ಅಥವಾ ಹೆಚ್ಚು ಮಹತ್ವ ಕೊಡಲಿಲ್ಲ ಎಂದು ಯೋಚಿಸುತ್ತೇನೆ.

ಒಂದು ಸಣ್ಣ ಪ್ರಶ್ನೆ.. ನಿಮಗೆ.

ಕನಕದಾಸರು ಎಂದೊಡನೆ ಯಾರ ಫೋಟೋ ನೆನಪಾಗತ್ತೆ ?

ಪುರಂದರದಾಸರು ಎಂದೊಡನೆ ಯಾರ ಫೋಟೋ ನೆನಪಾಗತ್ತೆ ?

ನನ್ನ ವಿಚಾರದಲ್ಲಿ, ಕನಕದಾಸರು ಎಂದಾಗ “ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ ಹಾಡುವ ರಾಜ್ಕುಮಾರ್ ನೆನಪಾಗತ್ತೆ. ಹಾಗೆಯೇ ಪುರಂದಾಸದಾಸರು ಎಂದಾಗಲೂ “ಮಧುಕರ ವೃತ್ತಿ ಎನ್ನದು” ಎಂದು ಹಾಡಿಕೊಂಡು ಹೋಗುವ ರಾಜ್ಕುಮಾರ್ ನೆನಪಾಗಿತ್ತೆ. ಅಷ್ಟರ ಮಟ್ಟಿಗೆ ದಾಸರಲ್ಲಿ ಭೇದವನ್ನು ತೊಡೆದುಹಾಕುವ ಸಾಮರ್ಥ್ಯ ಕಲೆಗೆ ಸಾಧ್ಯವಾಗಿದೆ. ನನ್ನಂತೆ ಅನೇಕರಿಗೂ ಕನಕದಾಸರು ಮತ್ತು ಪುರಂದರಸಾದರು ಎಂದಾಗ ರಾಜ್ಕುಮಾರೇ ನೆನಪಾಗ್ತಾನೆ ಅನಿಸುತ್ತೆ. ಈಗಿನ ಸಮಾಜವಾದಿಗಳು ಮಾಧ್ಯಮಗಳಲ್ಲಿ ಉಡುಪಿ, ಕುರುಬರು ಶೈವರು, ವೈಷ್ಣವ ದೀಕ್ಷೆ, ಮಾನವ ದೀಕ್ಷೆ, ಇಂತಹ ವಿಚಾರಗಳ ಬಗ್ಗೆ ಪುಂಖಾನುಪುಂಖವಾಗಿ ಬರೆಯುವಾಗ “ಏಕೆ ಸಮಾಜವಾದಿಗಳು ಈ ವಿಚಾರದತ್ತ ತಲೆಹಾಕಲಿಲ್ಲ ಅಥವಾ ಹೆಚ್ಚು ಮಹತ್ವ ಕೊಡಲಿಲ್ಲ” ಎಂದು ಯೋಚಿಸುತ್ತೇನೆ.

ಪುರಂದರದಾಸರು ಮತ್ತು ಕನಕದಾಸರು ಇಬ್ಬರನ್ನೂ ತಮ್ಮಲ್ಲಿಯೇ ಆವಾಹಿಸಿಕೊಂಡ ರಾಜಕುಮಾರರು ನನ್ನ ಕಣ್ಣಿಗೆ ಇಲ್ಲಿಯವರೆಗಿನ ದೊಡ್ಡ ಸಮಾಜವಾದಿಯಾಗಿ ಕಾಣುತ್ತಾರೆ. ಆಡಿಯೂ ತೋರಿಸದವಗಿಂತ ಮಾಡಿ ತೋರಿಸಿದ ಉತ್ತಮರೊಳ್ ಉತ್ತಮರು.

ಇಂದಿನ ಗೂಗಲ್-ಡೂಡಲಿನಲ್ಲಿ ರಾಜಕುಮಾರರನ್ನು ನೋಡಿದಾಗ ಖುಷಿಯಾಗುತ್ತಿದೆ.

Advertisements