ಕುಕ್ಕರ್ ಪ್ಯಾನಿನಲ್ಲಿ ಒಂಚೂರು ಹೆಚ್ಚಿನಿಸುವಷ್ಟು ತುಪ್ಪುವನ್ನು ಹಾಕಿ, ಜೀರಿಗೆ, ಗೋಡಂಬಿ, ಲವಂಗ, ಚಕ್ಕೆ(ಸಣ್ಣಕ್ಕಿರಲಿ), ಗುಂಡು ಏಲಕ್ಕಿ ಹಾಕಿ ಹುರಿಯಲು ಇಡಿ.

ಒಂದೆರೆಡು ನಿಮಿಷಗಳ ನಂತರ, ಇದಕ್ಕೆ ತರಕಾರಿಗಳನ್ನು ಹಾಕಿ ಬೇಯಿಸುತ್ತಿರುವುದು. ನಾವು ಈ ದಿನ ಇದಕ್ಕೆ ಹಸಿಬಟಾಣಿ, ಕ್ಯಾರೆಟ್ಟು, ಹುರಳಿಕಾಯಿ, ಉದ್ದುದ್ದ ಹೆಚ್ಚಿರುವ ಕೋಸು ಹಾಕಿದ್ವಿ.

ಒಂದು ಮಿಕ್ಸಿ ಜಾರಿನಲ್ಲಿ ಹಸಿಮೆಣಸಿನ ಕಾಯಿ, ಕೊಬ್ಬರಿ ತುಂಡುಗಳು, ಕಾಯಿತುರಿ, ಪುದೀನ, ಒಂಚೂರು ಜೀರಿಗೆ, ಶುಂಠಿ, ಹರಿಶಿನ ಕೊಂಬು, (ಅಳತೆಗೆ ತಕ್ಕಷ್ಟು ನೀರು) ಹಾಕಿ ರುಬ್ಬಿಕೊಳ್ಳುವುದು.

ರುಬ್ಬಿಕೊಂಡ ಚಟ್ನಿ ರೀತಿಯ ರುಬ್ಬನ್ನು (ಇದಕ್ಕೆ ಬೇರೆ ಏನಾದರು ಪದ ಇದೆಯೇ) ಬೇಯುತ್ತಿರುವ ತರಕಾರಿಗೆ ಹಾಕಿ, ಒಂದು ಚೂರು ಉಪನ್ನು ಹಾಕಿ, ನಂತರ ಇದಕ್ಕೆ ಅಕ್ಕಿಯನ್ನು ಹಾಕಿರಿ. ಬೇಕಿದ್ದರೆ, ಒಂದು ಚೂರು ನಿಮ್ಮ ನಿಮ್ಮ ಮನೆಯಲ್ಲಿ ಮಾಡಿರುವ ಪಲಾವ್ ಪುಡಿಯನ್ನು ಹಾಕಿ (ಪರಿಮಳಕ್ಕೆ)

ನಂತರ, ಮತ್ತೊಂದು ಪಾತ್ರೆಯಲ್ಲಿ ನೀರನ್ನು ಕಾಯಲು ಇಡಿ. ಒಂದಳತೆ ಅಕ್ಕಿಗೆ ಬಾಸುಮತಿಯಾದರೆ ಒಂದರಿಂದ-ಒಂದೂವರೆಯಷ್ಟು ಅಳತೆ ನೀರು ಸಾಕು. ಬೇರೆ ಅಕ್ಕಿಯಾದರೆ, ಒಂದೂವರೆ ಹಾಕಿ.

ನೀರು ಬಿಸಿಯಾದ ನಂತರ, ಬೇಯುತ್ತಿರುವ ಅಕ್ಕಿಯಿರುವ ಪ್ಯಾನಿಗೆ ಹಾಕಿ, ಮುಚ್ಚಿಡಿ.

ಎರಡು ಕೂಗಿನ ನಂತರ, ಆರಿಸಿ ಕೆಳಗಿಡಿ.

(ಕಡಿಮೆ ಉರಿಯಲ್ಲಿ ಬೇಯಿಸುವುದು ಒಳ್ಳೆಯದು).

ಇದೇನು – ಪಲಾವ್ ಮಾಡುವ ರೀತಿ ಇದೆಯಲ್ಲ ಅಂದ್ಕೊಂಡ್ರಾ, ಅದಕ್ಕೇನೀಗ…. ತಿನ್ನೋದಕ್ಕೆ ಹೆಸರೇಕೆ ಬೇಕು ಅಲ್ವಾ…. ತಿನ್ನೋದಕ್ಕಂತು ತುಂಬ ಚೆನ್ನಾಗಿದೆ.

Advertisements