International Frozen Yogurt Day

“ಇಂಟರನ್ಯಾಷನಲ್ ಫ್ರೋಝನ್ ಯೋಗರ್ಟ ಡೇ” !!!! – ಈ ರೀತಿಯ ದಿನವೂ ಇದೆ ಅಂತ ಇದೇ ಅಚಾನಕ್ ಆಗಿ ಗೊತ್ತಾಯ್ತು. ನಾವಿರುವ ತಾವಿನಲ್ಲಿ ಸ್ವಲ್ಪ ಸ್ವಲ್ಪವೇ ಚಳಿ ಕಡಿಮೆಯಾಗುತ್ತಿದೆ. ಹಾಗೆಯೇ, ಸಂಜೆ ಆರರ ತನಕ ಬೆಳಕು ಇರತ್ತೆ. ಹಾಗಾಗಿ, ನಮ್ಮ ಮಗುವಿಗೆ ಮೊದಲ ಬಾರಿ, ಯೋಗರ್ಟ್ ಕೊಡಿಸೋಣ ಅಂತ ಕರೆದುಹೋದೆ.

ಇಲ್ಲಿ, ಮಕ್ಕಳಿಗೆ ಐ-ಸ್ಕ್ರೀಂ ಬದಲಿಗೆ ಹೆಚ್ಚಿನ ತಾಯಿ-ತಂದೆಯರು ಫ್ರೋಝನ್ ಯೋಗರ್ಟ್ ಕೊಡಿಸುತ್ತಾರೆ. ಫ್ರೋಝನ್ ಯೋಗರ್ಟಿಗೆ ಬೇರೆ ಬೇರೆ ಹಣ್ಣಿನ ರುಚಿ ಹತ್ತಿರಸಿರುತ್ತಾರೆ. ಮಾವು, ತೆಂಗಿನಕಾಯಿ, ಪೈನಾಪಲ್, ವೆನಿಲಾ, ಚಾಕೋಲೇಟ್, ಓರಿಯೋ ಹೀಗೆ.

ಹೇಗಿದ್ದರೂ, ಶಾಲೆಯಿಂದ ಕರೆದುಕೊಂಡು ಬರಬೇಕಿತ್ತು. ಶಾಲೆ ಬಿಟ್ಟ ನಂತರ, ಮಗುವಿಗೆ ಈ ದಿನ, ಈ ಯೋಗರ್ಟ್ ಕೊಡಿಸೋ ನೆಪದಲ್ಲಿ “ನಾನೂ ಸ್ವಲ್ಪ ತಿನ್ನೋಣ” ಎಂಬ “ಬ್ರಿಲಿಯೆಂಟ್ ಐಡಿಯಾ” ಮಾಡಿ ಅಂಗಡಿಗೆ ಹೊರಟೆ. ಕಾರನ್ನು ಪಾರ್ಕಿಂಗ್ ಲಾಟಿನಲ್ಲಿ ನಿಲ್ಲಿಸಿ, ಯೋಗರ್ಟ್ ಅಂಗಡಿಯತ್ತ ಹೆಜ್ಜೆ ಹಾಕಿದರೆ, ಅಲ್ಲಿ “ದೊಓಓಓಓಡ್ಡ ಕ್ಯೂ”. ಏನಿದು, ಬಹುಶಃ ನಾನು ಯೋಚಿಸಿದಂತೆಯೇ ಎಷ್ಟೋ ಅಪ್ಪ-ಅಮ್ಮಂದಿರು “ಚಳಿ ಮುಗಿಯುತ್ತಿರುವ ಕಾರಣ ಮಕ್ಕಳಿಗೆ ಯೋಗರ್ಟ್ ಕೊಡಿಸೋಣ ಅಂತ ಕರೆದುಕೊಂಡು ಬಂದಿರಬೇಕು” ಅಂತ ಬಗೆದು ಸರದಿನಲ್ಲಿ ಇವನ ಸಮೇತ ನಿಂತೆ. ಆಮೇಲೆ ನನ್ನ ಮುಂದಿದ್ದ ಮತ್ತಿಬ್ಬರು ಹುಡುಗರು, ಐಸ್ಕ್ರೀಂ-ಯೋಗರ್ಟ್ ವಿಚಾರವಾಗಿ ಏನೋ ಮಾತಾಡುತ್ತಿದ್ದರು. ನಾನೂ ಅವರೊಡನೆ ಕಲೆತು ಮಾತನಾಡುತ್ತಿದ್ದಾಗ, ಅದೇನೋ ಈ ದಿನ “ಯೋಗರ್ಟ್ ಇಲ್ಲ” ಎಂದ ಹಾಗಾಯಿತು.

What !!! ಅಂತ ನಾನು ಆಶ್ಚರ್ಯ ಚಕಿತನಾಗಿ, Is there is no yogurt today, ಅಂತ ನಾನು ಕೇಳಿದರೆ,

NOO!!! How can it be possible ? Today is International Yogurt Day!!! We get Free Yogurt ಅನ್ನೋದೇ !!!!

“ವಾವ್, ಸೂಪರ್ ಅಂದ್ಕೊಂಡು, ನಾನೊಂದು ಕಪ್, ಮಗುವಿಗೊಂದು ಅರ್ಧ ಕಪ್ ಕೊಟ್ಟು, ಇಬ್ಬರೂ ಯೋಗರ್ಟ್ ಸವಿದು ಮಗುವಿನ ಅಮ್ಮನನ್ನು ಕರೆದುಕೊಂಡು ಬರಲು ಹೊರಟ್ವಿ ” ಎಂಬುವಲ್ಲಿಗೆ ಇಂಟರನ್ಯಾಷನ್ ಫ್ರೋಝನ್ ಯೋಗರ್ಟ್ ಡೇ ಪುರಾಣವು ಪರಿಸಮಾಪ್ತಿಯಾದುದು. ಅದೇ ರೀತಿ, “ಇಂಟರನ್ಯಾಷನಲ್ ನ್ಯೂಟೆಲ್ಲಾ ಡೇ” ಅಂತಲೂ ಇದೆಯಂತೆ.

Advertisements
Posted in Uncategorized | 1 ಟಿಪ್ಪಣಿ

ಫ್ರೆಂಚ್ ವಿದ್ವಾಂಸರಿಂದ ಭಾರತ ಸಾಹಿತ್ಯ ವಿಶ್ವಕೋಶ ರಚನೆ

http://www.prajavani.net/news/article/2018/02/03/551545.html

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ನನ್ನ ಪೆನ್ಸಿಲ್ ಬಾಕ್ಸು

ನಾನು ಎಂಟನೇ ಕ್ಲಾಸಿನಲ್ಲಿ ಇದ್ದಾಗ ನನಗೊಂದು ಕೊರಗು ಇತ್ತು. ಅದೇನೆಂದರೆ ನನ್ನ ಬಳಿ ಒಂದೂ ಬಾಕ್ಸ್ ಇರಲಿಲ್ಲ. ನಮ್ಮ ಕ್ಲಾಸಿನಲ್ಲಿ ಬಹುತೇಕ ಎಲ್ಲರ ಬಳಿಯೂ ಪೆನ್ಸಿಲ್ ಬಾಕ್ಸ್ ಇತ್ತು.

ಸಾಮಾನ್ಯವಾಗಿ ನಾನು ನಮ್ಮ ತಂದೆಯವರಿಗೆ ಅಗತ್ಯವಿಲ್ಲದ್ದು ಏನನ್ನೂ ಕೇಳುತ್ತಿರಲಿಲ್ಲ. ಆದರೆ ಈ ವರ್ಷ ಸೆಟ್-ಸ್ಕೇರ್, ಪ್ರೊಟ್ರಾಕ್ಟರ್, ಸ್ಕೇಲ್ ಎಲ್ಲ ಹಿಡಿದುಕೊಳ್ಳಬೇಕಿದ್ದರಿಂದ ಒಂದು ಜಾಮಿಟ್ರಿ ಬಾಕ್ಸ್ ಬೇಕೇ ಬೇಕಿತ್ತು. ಆದರೆ ಹೇಗೆ ಕೇಳುವುದು ಎಂದು ಯೋಚನೆಯಾಗಿತ್ತು 🤔

ಒಮ್ಮೆ ನಾನು ಮತ್ತು ನಮ್ಮ ತಂದೆಯವರು ಒಟ್ಟಿಗೇ ಮಲ್ಲೇಶ್ವರದಲ್ಲಿನ ಒಂದು ಪುಸ್ತಕದ ಅಂಗಡಿಯ ಬಳಿ ನಡೆದುಹೋಗುತ್ತಿದ್ದಾಗ, ಭಯದಿಂದಲೇ, “ಅದೂ, ನಾನೊಂದು ಕೇಳಿದರೆ ಕೊಡಿಸ್ತೀರಾ ಅಂತ ಕೇಳಿದೆ”. ಸಾಮಾನ್ಯವಾಗಿ ಹೀಗೆ ಏನೂ ಕೇಳದ ನಾನು ಏನೋ ಅಗತ್ಯವಾದದ್ದೇ ಕೇಳುತ್ತೇನೆ ಅಂತಲೋ ಏನೋ, ನಮ್ಮ ತಂದೆಯವರು “ಏನು ಬೇಕು?” ಅಂತ ಕೇಳಲು, “ನನಗೊಂದು ಬಾಕ್ಸ್ ಬೇಕು” ಅಂತ ಮೆತ್ತಗೆ ಕೇಳಿದೆ.

ಸಾಮಾನ್ಯವಾಗಿ,‌”ಏನು?, ಎತ್ತ?, ಏಕೆ?” ಎಂದು ಕೇಳುವ ನಮ್ಮ ತಂದೆಯವರು, ಆ ಸಂಜೆ ಮೊದಲ ಬಾರಿಗೆ ಏನೂ ಮರುಪ್ರಶ್ನೆ ಮಾಡದೆ, ನೇರವಾಗಿ ಪುಸ್ತಕದ ಅಂಗಡಿಗೆ ಕರೆದುಕೊಂಡು ಹೋಗಿ, ಇದ್ದುದರಲ್ಲಿ ಕಡಿಮೆ ರೇಟಿನ ಆದರೆ ಬಾಳಿಕೆ ಬರುವಂತಹ ಈ ಬಾಕ್ಸ್ ಕೊಡಿಸಿದ್ದರು. ಕೊಡಿಸುವಾಗಲೇ ಹುಶಾರಾಗಿಟ್ಟುಕೊಳ್ಳಬೇಕು ಅಂತಲೂ ಕಿವಿಮಾತು ಹೇಳಿದ್ದರು.

ಈ ಬಾಕ್ಸ್ ಒಂದು ರೀತಿ ನನಗೆ “ಅದೃಷ್ಟದ ಬಾಕ್ಸ್” ಆಗಿತ್ತು. ಈ ಬಾಕ್ಸ್ ನನ್ನ ಬ್ಯಾಗ್ ಸೇರಿದಾಗಿನಿಂದ(ಬ್ಯಾಗಿನದ್ದೂ ಒಂದು ಕತೆಯಿದೆ, ಅದನ್ನು ಆಮೇಲೆ ಬರೆಯುವ) ಕಾಕತಾಳೀಯವೇನೋ ಎಂಬಂತೆ ನಾನು ಕ್ಲಾಸಿನಲ್ಲಿ ಮೊದಲ ರ್ಯಾಂಕ್ ಪಡೆಯಲಾರಂಭಿಸಿದೆ. ಅಲ್ಲಿಯವರೆಗೆ ನಾನು ಹೆಚ್ಚೆಂದರೆ ಹತ್ತರೊಳಗೆ ಸುಮಾರಾದ ಒಂದು ರ್ಯಾಂಕ್ ಪಡೆಯುತ್ತಿದ್ದೆ. ರ್ಯಾಂಕ್ ಪಡೆಯುವುದು ಸಿಕ್ಕಾಪಟ್ಟೆ ದೊಡ್ಡ ವಿಷಯ ಅಂತ ನನಗೆ ಎಂದೂ ಅನಿಸಿರಲಿಲ್ಲ. ಆದರೆ ಕಡಿಮೆ ಅಂಕ ಬಂದಾಗ ಬೇಸರವಾಗುತ್ತಿತ್ತು. ಏಕೆಂದರೆ, ಆರನೇ ಕ್ಲಾಸಿನಲ್ಲಿ ಒಮ್ಮೆ ನಮ್ಮ ಟೀಚರ್ ಒಂದು ಕಿವಿಮಾತು ಹೇಳಿದ್ದರು. ಅದೇನೆಂದರೆ ನೀವು ದೇವರಲ್ಲಿ “ಜಾಸ್ತಿ ಮಾರ್ಕ್ ಕೊಡಪ್ಪ, ಫಸ್ಟ್ ರ್ಯಾಂಕ್ ಬರ್ಸಪ್ಪ, ಅಂತ ಯಾವತ್ತೂ ಕೇಳಬೇಡಿ, ಬದಲಿಗೆ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡಪ್ಪ ಅಂತ ಕೇಳಿಕೊಳ್ಳಬೇಕು” ಅಂತ ಹೇಳಿಕೊಟ್ಟಿದ್ದರು. ಆ ಹಿನ್ನೆಲೆಯಲ್ಲಿ, ಒಂದು ವೇಳೆ ಕಡಿಮೆ ಅಂಕಗಳು ಬಂದರೆ, “ಮತ್ತಷ್ಟು ಕಷ್ಟ ಪಡೋಕ್ಕೆ ಆಗ್ತಿಲ್ಲವಲ್ಲ” ಅಂತ ಬೇಸರವಾಗುತ್ತಿತ್ತು.

ಈಗ ಬಾಕ್ಸಿನ ವಿಷಯಕ್ಕೆ ಹಿಂದಿರುಗಿದರೆ, ಎಂಟನೇ ಕ್ಲಾಸಿನಲ್ಲಿ ಮೊದಲಾದ ಇದರೊಂದಿಗಿನ ಒಡನಾಟ ನಾನು ಇಂಜಿನಿಯರಿಂಗ್ ಮುಗಿಸುವರೆಗೂ ಇತ್ತು. ನಂತರ ಈ “ಅದೃಷ್ಟದ ಬಾಕ್ಸ್” ನನ್ನ ತಮ್ಮನ ಬ್ಯಾಗ್ ಸೇರಿತು. ನನ್ನ ತಮ್ಮ ಒಮ್ಮೊಮ್ಮೆ ಪೆನ್ಸಿಲ್ಲು, ರಬ್ಬರು ಇವುಗಳನ್ನು ಕಳೆದುಕೊಳ್ಳುತ್ತಿದ್ದ. ಆದರೆ ಈ ಬಾಕ್ಸಿನ ಅದೃಷ್ಟವೋ ಅಥವಾ ನನ್ನ ತಮ್ಮನ ಅದೃಷ್ಟವೋ ಈ ಬಾಕ್ಸು ಮಾತ್ರ ಕಳ್ಳಕಾಕರ ಪಾಲಾಗಲಿಲ್ಲ. ಕಾಲಾಂತರದಲ್ಲಿ ಅವನೂ ಸಿ.ಎ ಮಾಡಿದ. ಈಗ ಇದು ಮತ್ತೆ ನನ್ನ ಕೈಸೇರಿದೆ.

ಬರುವ ತಿಂಗಳು ಈ ಬಾಕ್ಸಿಗೆ ಬರೋಬ್ಬರಿ ೨೧ ವರ್ಷಂಗಳು ತುಂಬಲಿವೆ. ನನ್ನ ಶೈಕ್ಷಣಿಕ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಈ ಬಾಕ್ಸಿಗೆ ನನ್ನ ನನ್ನಿಗಳು. ಹಾಗೆಯೇ ಆ ದಿನ ನನಗೆ ಈ ಬಾಕ್ಸ್ ಕೊಡಿಸಿದ ನಮ್ಮ ತಂದೆಯವರಿಗೆ ಹೆನ್ನನ್ನಿ.

Posted in Uncategorized | 2 ಟಿಪ್ಪಣಿಗಳು

ಸಂಸ್ಕೃತದಲ್ಲಿ ಗಾದೆ

ಸಂಸ್ಕೃತದಲ್ಲಿ ಗಾದೆ ಇದ್ಯಂತೆ……

“ಯಥಾ ರಾಜಾ…ತಥಾ ಪ್ರಜಾ” ಅಂತ….. ಹೆಚ್ಚಿನ ವಿವರಗಳಿಗೆ ಇದನ್ನು ನೋಡಿ.

 

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಗರುಡಗಮನ ತವ ಚರಣಕಮಲಮಿಹ

ನನಗೆ ಈ ಸ್ತೋತ್ರ(ಅಥವಾ ಪದ್ಯ ಅಂತಲೇ ಕರೆಯಿರಿ) ತುಂಬಾ ಇಷ್ಟವಾಯ್ತು.

ಕೇಳಿ ಆನಂದಿಸಿ

 

ನಾಟ್ಯರೂಪದಲ್ಲಿ ಒಂದು ಮಗು ಪ್ರಸ್ತುತ ಪಡಿಸುವುದನ್ನೂ ನೋಡಿ ಆನಂದಿಸಿ.

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

Bad Appa

ಮಗು – ಅಪ್ಪ, ನೀವಂದ್ರೆ ನಂಗೆ ತುಂಬಾ ಇಷ್ಟ.
ನಾನು – ಹೌದಾ ಚಿನ್ನು..ಮತ್ತೆ ನೆನ್ನೆ ನಾನು, Bad appa, ಅಂತ ಹೇಳ್ತಾ ಇದ್ದೆ.
ಮಗು – ಇಲ್ಲ, ನೀವು ತುಂಬಾ ಗುಡ್ ಬಾಯ್.
ನಾನು – ಇಲ್ಲ, ಚಿನ್ನು ನಾನು ತುಂಬಾ ಬ್ಯಾಡ್ ಬಾಯ್..
ಮಗು – ಇಲ್ಲ ಅಪ್ಪ, ಇಲ್ಲ ಅಪ್ಪ, ಅದು ನೀವು ತುಂಬಾ ಗುಡ್ ಬಾಯ್.
ನಾನು – ಇಲ್ಲ, ಚಿನ್ನು ನಾನು ತುಂಬಾ ಬ್ಯಾಡ್ ಬಾಯ್..
ಮಗು – ಇಲ್ಲ ಅಪ್ಪ, ಇಲ್ಲ ಅಪ್ಪ, ಅದು ನೀವು ತುಂಬಾ ಗುಡ್ ಬಾಯ್.
ನಾನು – ಇಲ್ಲ, ಚಿನ್ನು ನಾನು ತುಂಬಾ ಬ್ಯಾಡ್ ಬಾಯ್..
ಮಗು – ಇಲ್ಲ ಅಪ್ಪ, ಅದು ನೀವು ತುಂಬಾ ಗುಡ್ ಬಾಯ್.
ನಾನು – ಇಲ್ಲ, ಚಿನ್ನು ನಾನು ತುಂಬಾ ಬ್ಯಾಡ್ ಬಾಯ್..
ಮಗು – ಇಲ್ಲ ಅಪ್ಪ, ಅದು ನೀವು ತುಂಬಾ ಗುಡ್ ಬಾಯ್.
ನಾನು – ಇಲ್ಲ, ಚಿನ್ನು ನಾನು ತುಂಬಾ ಬ್ಯಾಡ್ ಬಾಯ್..
ಮಗು – ಇಲ್ಲ ಅಪ್ಪ, ಅದು ನೀವು ತುಂಬಾ ಗುಡ್ ಬಾಯ್.
ನಾನು – ಇಲ್ಲ, ಚಿನ್ನು ನಾನು ತುಂಬಾ ಬ್ಯಾಡ್ ಬಾಯ್..
ಮಗು – ಇಲ್ಲ ಅಪ್ಪ, ನೀವು ತುಂಬಾ ಗುಡ್ ಬಾಯ್.
ನಾನು – ಇಲ್ಲ, ಚಿನ್ನು ನಾನು ತುಂಬಾ ಬ್ಯಾಡ್ ಬಾಯ್..
ಮಗು – ನೀವು ತುಂಬಾ ಗುಡ್ ಬಾಯ್.
ನಾನು – ಇಲ್ಲ, ಚಿನ್ನು, ನಿಮ್ಮಪ್ಪ ತುಂಬ ಕೆಟ್ಟೋರು.
ಮಗು – ವ್ಯಾ……..Bad appa.(ಕೋಪಮಾಡಿಕೊಂಡು ಕೈಕಟ್ಟಿ, ನಾನು ನಿಮ್ಮ ಜೊತೆ ಮಾತಾಡಲ್ಲ ಅನ್ನೋ ಪೋಸ್ ಕೊಟ್ಟ)

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

ಅಮರಕೋಶದ ಬಗೆಗಿನ ಎರಡು ತಮಾಷೆಗಳು

ನಾನು ಅಮರಕೋಶವನ್ನು ಬಾಯಿಪಾಠವನ್ನಂತು ಮಾಡಿಲ್ಲ. ಆದರೆ ನಮ್ಮ ತಂದೆಯವರು ಚಿಕ್ಕವರಿದ್ದಾಗ ಅವರಿಗೆ ಬಾಯಿಪಾಠ ಮಾಡಿಸುತ್ತಿದ್ದರಂತೆ. ಆಗಿನ ಕಾಲದ ಒಂದೆರೆಡು ತಮಾಷೆಯ ವಿಚಾರಗಳು.

ಅಮರಾ ನಿರ್ಜರಾ ದೇವಾಸ್ತ್ರಿದಶಾ ವಿಭುಧಾ ಸುರಾಃ ||

ಇದನ್ನು ಅವರುಗಳು, ಹೀಗೆ ಮಾಡುತ್ತಿದ್ದರಂತೆ.

“ಅಮರ ನಿರ್ಜರಾ ದೇವ, ಅಮರದ ಮೇಷ್ಟ್ರಿಗೆ ಜ್ವರ ಬರ, ನಮಗೆಲ್ಲ ರಜ ಬರ.”

ಹಾಗೆಯೇ……. ಮತ್ತೊಂದು….

ಯಸ್ಯಜ್ಞಾನದಯಾಸಿಂಧೋರಗಾಧಸ್ಯಾನಘಾ ಗುಣಾ: |

ನೀವು ಅಮರಕೋಶವನ್ನು ಬಾಯಿಪಾಠ ಮಾಡಿದ್ದರೆ, ಇದನ್ನು ಯಾವ ಧಾಟಿಯಲ್ಲಿ ಹೇಳಬೇಕು ಅಂತ ಗೊತ್ತಿರತ್ತೆ.. ಅದೇ ಧಾಟಿಯಲ್ಲಿ, ಹೀಗೆ ಹೇಳಿ.

“ಹಾಲು ಹಿಟ್ಟು ನೆನೆಹಾಕಿ ಸಮಯ ನೋಡಿ ಭಕ್ಷಿಸಿ.”

 

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ